ಅನುಕೂಲ ಕಲ್ಪಿಸಿದ ಡಾ.ಪ್ರಭಾಕರ ಕೋರೆ

ಕಂಕಣವಾಡಿಯ ಡಾ.ಪ್ರಭಾಕರ ಕೋರೆ ಕೋ-ಆಪ್ ಸೊಸೈಟಿ ಸದಸ್ಯ ನಿಂಗಪ್ಪ ನಂದ್ಯಾಗೋಳ ವಾರಸುದಾರರಿಗೆ ಲಕ್ಷ ರೂ. ಅಪಘಾತ ವಿಮೆ ಚೆಕ್ ವಿತರಿಸಲಾಯಿತು. ರಾಜಶೇಖರ ಖನದಾಳೆ,  ಅಪ್ಪಾಸಾಹೇಬ ಬ್ಯಾಕೋಡ, ಶ್ರೀಶೈಲ ಮೂಡಲಗಿ, ಮಹಾಲಿಂಗ ಮುದ್ದಾಪುರ ಇತರರಿದ್ದರು.
ಕಂಕಣವಾಡಿಯ ಡಾ.ಪ್ರಭಾಕರ ಕೋರೆ ಕೋ-ಆಪ್ ಸೊಸೈಟಿ ಸದಸ್ಯ ನಿಂಗಪ್ಪ ನಂದ್ಯಾಗೋಳ ವಾರಸುದಾರರಿಗೆ ಲಕ್ಷ ರೂ. ಅಪಘಾತ ವಿಮೆ ಚೆಕ್ ವಿತರಿಸಲಾಯಿತು. ರಾಜಶೇಖರ ಖನದಾಳೆ, ಅಪ್ಪಾಸಾಹೇಬ ಬ್ಯಾಕೋಡ, ಶ್ರೀಶೈಲ ಮೂಡಲಗಿ, ಮಹಾಲಿಂಗ ಮುದ್ದಾಪುರ ಇತರರಿದ್ದರು.
Published on
ಮಾಂಜರಿ: ಸಪ್ತಋಷಿಗಳು ಸ್ಥಾಪಿಸಿರುವ ಕೆಎಲ್‌ಇ ಸಂಸ್ಥೆಯಿಂದ ಗುಣಮಟ್ಟದ ಶಿಕ್ಷಣ, ಆರೋಗ್ಯ ಮತ್ತು ಸಹಕಾರ ಸಂಘದಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿರುವ ಪದ್ಮಶ್ರೀ ಡಾ.ಪ್ರಭಾಕರ ಕೋರೆ ಅವರು ಹಲವಾರು ಸದಸ್ಯರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ ಕಂಕಣವಾಡಿ ಶಾಖೆ ಸಲಹಾ ಸಮಿತಿ ಅಧ್ಯಕ್ಷ ರಾಜಶೇಖರ ಖನದಾಳೆ ಹೇಳಿದರು.
ರಾಯಬಾಗ ತಾಲೂಕಿನ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ ಕಂಕಣವಾಡಿ ಶಾಖೆಯ ಸದಸ್ಯ ನಿಂಗಪ್ಪ ನಂದ್ಯಾಗೋಳ ಈಚೆಗೆ ಅಪಘಾತದಲ್ಲಿ ನಿಧನರಾದ ಹಿನ್ನೆಲೆ ಅವರ ವಾರಸುದಾರರಿಗೆ ಅಪಘಾತ ವಿಮೆ ೧ ಲಕ್ಷ ರೂ. ಮೌಲ್ಯದ ಚೆಕ್ ವಿತರಿಸಿ ಮಾತನಾಡಿದರು.
ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ದೇವೇಂದ್ರ ಕರೋಶಿ, ಸಲಹಾ ಸಮಿತಿ ಸದಸ್ಯ ಅಪ್ಪಾಸಾಹೇಬ ಬ್ಯಾಕೋಡ, ಶ್ರೀಶೈಲ ಮೂಡಲಗಿ, ಮಹಾಲಿಂಗ ಮುದ್ದಾಪುರ, ಹಾಲಪ್ಪ ಪಿರಿಗಿಪಾಟೀಲ, ಅಪ್ಪಣ್ಣ ಗಡಕರಿ, ನಿಂಗಪ್ಪ ಪಕಂಡಿ, ಮಹಾಂತೇಶ ಬೆನ್ನಳ್ಳಿ, ಭರತೇಶ ಪಾಟೀಲ, ಬಸಪ್ಪ ಮುಗಳಿ, ರಾವಸಾಹೇಬ ಗುಂಡಕಲ್ಲೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net