ಕೆಎಲ್‌ಇ ಉತ್ತುಂಗಕ್ಕೇರಿಸಿದ ಡಾ.ಪ್ರಭಾಕರ ಕೋರೆ

ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಅಮಿತ್ ಕೋರೆ, ಮಹಾಂತೇಶ ಕವಟಗಿಮಠ ಮತ್ತು ರಾಜ್ಯ ಸಹಕಾರ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ ಉಪಾಧ್ಯಕ್ಷ ಸಂದೀಪ ಪಾಟೀಲ ಅವರನ್ನು ಕಾರ್ಖಾನೆ ವತಿಯಿಂದ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಕೋರೆ, ತಾತ್ಯಾಸಾಹೇಬ ಕಾಟೆ, ಅಜಿತ್ ದೇಸಾಯಿ ಇತರರಿದ್ದರು.
ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾದ ಅಮಿತ್ ಕೋರೆ, ಮಹಾಂತೇಶ ಕವಟಗಿಮಠ ಮತ್ತು ರಾಜ್ಯ ಸಹಕಾರ ಸಕ್ಕರೆ ಕಾರ್ಖಾನೆಗಳ ಮಹಾಮಂಡಳ ಉಪಾಧ್ಯಕ್ಷ ಸಂದೀಪ ಪಾಟೀಲ ಅವರನ್ನು ಕಾರ್ಖಾನೆ ವತಿಯಿಂದ ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ ಕೋರೆ, ತಾತ್ಯಾಸಾಹೇಬ ಕಾಟೆ, ಅಜಿತ್ ದೇಸಾಯಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಪ್ರಶಂಸೆ
  • ಮೂವರು ಸಾಧಕರ ಸತ್ಕಾರ
ಮಾಂಜರಿ: ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದ ಚಿದಾನಂದ ಬಸಪ್ರಭು ಕೋರೆ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ರಾಷ್ಟ್ರೀಯ ಸಹಕಾರ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ನಿರ್ದೇಶಕ ಅಮಿತ್ ಕೋರೆ, ಕಾರ್ಖಾನೆ ನಿರ್ದೇಶಕ, ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹಾಗೂ ರಾಜ್ಯ ಸಹಕಾರ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ಉಪಾಧ್ಯಕ್ಷರಾಗಿ ಆಯ್ಕೆಯಾದ ಸಂದೀಪ ಪಾಟೀಲ ಅವರನ್ನು ಮಂಗಳವಾರ ಕಾರ್ಖಾನೆ ಆಡಳಿತ ಮಂಡಳಿ ಸಭೆಯಲ್ಲಿ ಸನ್ಮಾನಿಸಲಾಯಿತು.
ಚಿದಾನಂದ ಬಸಪ್ರಭು ಕೋರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ ಮಾತನಾಡಿ, ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಕೆಎಲ್‌ಇ ಸಂಸ್ಥೆಯನ್ನು ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಅವರ ಮಾರ್ಗ ದರ್ಶನದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆ ಆಡಳಿತ ಮಂಡಳಿಗೆ ಸದಸ್ಯರ ಅವಿರೋಧ ಆಯ್ಕೆಮಾಡಿರುವುದು ಸಮಯೋಚಿತ. ಕಾರ್ಖಾನೆ ಹಾಲಿ ನಿರ್ದೇಶಕರಾದ ಅಮಿತ್ ಕೋರೆ ಹಾಗೂ ಮಹಾಂತೇಶ ಕವಟಗಿಮಠ ಕೆಎಲ್‌ಇ ಸಂಸ್ಥೆಗೆ ಪುನಃ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ. ಸಹಕಾರ ಸಂಸ್ಥೆಗಳ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವವುಳ್ಳ ಸಂದೀಪ ಪಾಟೀಲ ಮಹಾಮಂಡಳದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಹರ್ಷ ತಂದಿದೆ ಎಂದರು.
ಕಾರ್ಖಾನೆ ಉಪಾಧ್ಯಕ್ಷ ತಾತ್ಯಾಸಾಹೇಬ ಕಾಟೆ, ನಿರ್ದೇಶಕರಾದ ಅಜಿತ್ ದೇಸಾಯಿ, ಭರತೇಶ ಬನವಣೆ, ಪರಸಗೌಡ ಪಾಟೀಲ, ನಂದಕುಮಾರ ನಾಶಿಪುಡಿ, ಮಹಾವೀರ ಮಿರ್ಜಿ, ಮಲ್ಲಪ್ಪ ಮೈಶಾಳೆ, ಚೇತನ ಪಾಟೀಲ, ಮಹಾವೀರ ಕಾತ್ರಾಳೆ, ಅಣ್ಣಾಸಾಬ ಇಂಗಳೆ, ಭೀಮಗೌಡ ಪಾಟೀಲ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಕ ಡಾ.ಆರ್.ಬಿ.ಖಾಂಡಗಾವೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net