ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಡಾ.ಸರಜೂ ಕಾಟ್ಕರ್ ಮತ್ತು ಸುಮಾ ಕಾಟ್ಕರ್ ಅವರನ್ನು ಸನ್ಮಾನಿಸಲಾಯಿತು. ಎಸ್.ಎಂ.ಕುಲಕರ್ಣಿ, ಬಿ.ಎಸ್.ಗವಿಮಠ, ಎಲ್.ಎಸ್.ಶಾಸ್ತ್ರಿ, ಬಸವರಾಜ ಜಗಜಂಪಿ ಇತರರಿದ್ದರು.
ಕನ್ನಡ ಸಾಹಿತ್ಯಲೋಕಕ್ಕೆ ಡಾ.ಸರಜೂ ಕಾಟ್ಕರ್ ಕೊಡುಗೆ ಅಪಾರ. ತಮ್ಮ ಕಾರ್ಯದ ಜತೆಗೆ ಹಲವು ಸಾಹಿತಿಗಳನ್ನು ಬೆಳೆಸಿರುವ ಕೀರ್ತಿ ಡಾ.ಸರಜೂ ಕಾಟ್ಕರ್ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಬಸವರಾಜ ಜಗಜಂಪಿ ಶ್ಲಾಘಿಸಿದರು.
ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಚಂದ್ರಕಾಂತ ಕುಸನೂರ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿ ಹಾಗೂ ಎಂ.ಕೆ.ಪಬ್ಲಿಸಿಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಪತುಂಗ ಪ್ರಶಸ್ತಿಗೆ ಭಾಜನರಾಗಿರುವ ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ಬೆಳಗಾವಿ ಬಹಳಷ್ಟು ಸಾಹಿತಿಗಳನ್ನು ಬೆಳೆಸಿದೆ. ಅದರಲ್ಲೂ ಡಾ.ಸರಜೂ ಕಾಟ್ಕರ್ ಸಾಹಿತ್ಯ ಲೋಕದ ಸವ್ಯಸಾಚಿ ಎನಿಸಿದ್ದಾರೆ ಎಂದರು.
ಹಿರಿಯ ಕವಿ ಎಂ.ಎಸ್.ಇಂಚಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರಜೂ ಕಾಟ್ಕರ್ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಬೆಳೆಸಿದ್ದಾರೆ. ಅವರಿಗೆ ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂದು ಆಶಿಸಿದರು.
ಸಾಹಿತಿಗಳಾದ ಬಿ.ಎಸ್.ಗವಿಮಠ, ಎಲ್.ಎಸ್.ಶಾಸ್ತ್ರಿ ಮಾತನಾಡಿ, 80 ಕತಿಗಳನ್ನು ಬರೆದಿರುವ ಸರಜೂ ಕಾಟ್ಕರ್ 35ಕ್ಕೂ ಹೆಚ್ಚು ಆಯ್ಕೆ ಸಮಿತಿಗಳಲ್ಲಿ ಕೆಲಸ ಮಾಡಿದ ಅಪರೂಪದ ಸಾಹಿತಿ, ಅವರಿಂದ ಸಾಹಿತ್ಯ ಲೋಕ ಇನ್ನಷ್ಟು ಬೆಳಗಲಿ. ಸಾಹಿತ್ಯ ಮತ್ತು ಪತ್ರಿಕೋದ್ಯಮ ಎರಡೂ ೇತ್ರಗಳಲ್ಲಿ ಕೆಲಸ ಮಾಡಿರುವ ಅವರು ಅಪರೂಪದ ಸಾಧಕರು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಸರಜೂ ಕಾಟ್ಕರ್, ಬೆಳಗಾವಿ ನನಗೆ ಎಲ್ಲವನ್ನೂ ನೀಡಿ ಬೆಳೆಸಿದೆ. ಜ್ಞಾನಪೀಠ ಪ್ರಶಸ್ತಿಯಷ್ಟೇ ಮಹತ್ವದ ನಪತುಂಗ ಪ್ರಶಸ್ತಿ ಸಿಕ್ಕಿದ್ದು ಅತ್ಯಂತ ಸಂತಸ ನೀಡಿದೆ ಎಂದರು.
ಹಿರಿಯ ವಕೀಲ ಎಸ್.ಎಂ.ಕುಲಕರ್ಣಿ ಅಧ್ಯತೆ ವಹಿಸಿದ್ದರು. ಚಂದ್ರಕಾಂತ ಕುಸನೂರ ಪ್ರತಿಷ್ಠಾನದ ಅಧ್ಯ ರವಿ ಕೊಟಾರಗಸ್ತಿ, ರಂಗತ ರಾಮಕಷ್ಣ ಮರಾಠೆ, ಆರ್.ಬಿ.ಕಟ್ಟಿ, ಎಂ.ಕೆ.ಜೆನಾಪುರ, ಶಿರೀಶ ಜೋಶಿ, ಪಿ.ಜಿ.ಕೆಂಪಣ್ಣವರ, ಖುಷಿ ಡವಳಿ ಇತರರಿದ್ದರು.