ವೈಜ್ಞಾನಿಕ ಸಮ್ಮೇಳನಕ್ಕೆ ಸಹಕಾರ

ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ
Published on
ಬೆಳಗಾವಿ: ನಗರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ 6ನೇ ವೈಜ್ಞಾನಿಕ ಸಮ್ಮೇಳನ ಯಶಸ್ವಿಯಾಗಿ ಆಯೋಜಿಸಲು ವೈಯಕ್ತಿಕವಾಗಿಯೂ ಸಹಕಾರ ನೀಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಘಟಪ್ರಭಾ ಪಟ್ಟಣದ ಡಾ.ಹರ್ಡೆಕರ್ ಸೇವಾದಳ ಅಕಾಡೆಮಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದರು. ಹೊಸ ಆವಿಷ್ಕಾರ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವ ಮೂಲಕ ಯುವ ಪೀಳಿಗೆಗೆ ಉಜ್ವಲ ಭವಿಷ್ಯದ ದಾರಿ ತೋರಿಸುವ ಶಕ್ತಿ ವಿಜ್ಞಾನಕ್ಕಿದೆ. ಅದಕ್ಕಾಗಿ ರಾಜ್ಯ ಮಟ್ಟದ 6ನೇ ವೈಜ್ಞಾನಿಕ ಸಮ್ಮೇಳನ ಯಶಸ್ಸಿಗೆ ಜಿಲ್ಲೆಯ ಜನರು ಶ್ರಮಿಸಬೇಕೆಂದು ಕರೆ ನೀಡಿದರು.
ಹುಲಿಕಲ್ ನಟರಾಜ ನೇತೃತ್ವದಲ್ಲಿ ಈಗಾಗಲೇ ಐದು ಸಮ್ಮೇಳನಗಳು ಯಶಸ್ಸು ಕಂಡಿವೆ. ಬೆಳಗಾವಿ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ, ಮಹಾಂತೇಶ ಕಂಬಾರ, ಕುಮಾರ ಕಂಬಾರ, ಸಂಗಮೇಶ ಹಚಡದ, ಬಸವರಾಜ ಹಟ್ಟಿಗೌಡರ, ಡಾ.ಸ್ವಾತಿ ವೈದ್ಯ, ನಾಗರತ್ನಾ ಖನ್ನಿನಾಯ್ಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net