ಜಿಲ್ಲೆ ವಿಭಜನೆಗೆ ಸಭೆಗೆ ಕನ್ನಡ ಸಂಘಟಕರನ್ನು ಕರೆಯಲು ಒತ್ತಾಯ

map
map
Published on
ಬೆಳಗಾವಿ: ಜಿಲ್ಲೆ ವಿಭಜನೆಗೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಲಿರುವ ಶಾಸಕರ ಸಭೆಗೆ ಗಡಿಭಾಗದ ಕನ್ನಡ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹಿಸಲಾಗಿದೆ. ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ವಿವಿಧ ಕನ್ನಡಪರ ಸಂಘಟಕರು ಈ ಆಗ್ರಹ ಮಾಡಿದರು.
ಈ ಹಿಂದೆ 1992ರ ಆ.22ರಂದು ಜೆ.ಎಚ್.ಪಟೇಲ್ ಸರ್ಕಾರ ಬೆಳಗಾವಿ, ಚಿಕ್ಕೋಡಿ ಹಾಗೂ ಗೋಕಾಕ ಜಿಲ್ಲೆಗಳನ್ನಾಗಿ ವಿಭಜಿಸಿತ್ತು. ಜಿಲ್ಲೆಯ 11 ಜನತಾದಳದ ಶಾಸಕರನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಇದರ ಪರಿಣಾಮ ಸುದೀರ್ಘ ಹೋರಾಟ ನಡೆದಿತ್ತು. ಆಗ ಜಲ್ಲೆ ವಿಭಜನೆ ನಿರ್ಣಯ ಕೈಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳನ್ನೂ ಸಭೆಗೆ ಆಹ್ವಾನಿಸಿ ಸಾಧಕ-ಬಾಧಕ ಚರ್ಚಿಸಬೇಕು ಎಂದು ಕೋರಿದರು.
ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಮಹಾದೇವ ತಳವಾರ, ವಾಜೀದ್ ಹಿರೇಕೊಡಿ, ಆರ್.ಅಭಿಲಾಷ, ಬಲರಾಮ ಮಾಸೇನಟ್ಟಿ, ರಾಜು, ಕಸ್ತೂರಿ ಭಾವಿ, ಸುರೇಶ ಹಂಜಿ, ರಾಜೇಶ್ವರಿ ಹಿರೇಮಠ, ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net