ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಮಸ್ಯೆ ನಿವಾರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ಸುಪ್ರಿಂ ಕೋರ್ಟ್ ಆದೇಶನ್ವಯ ಜಿಲ್ಲೆಯಲ್ಲಿರುವ ಶಾಲೆ, ಕಾಲೇಜು, ಆಸ್ಪತ್ರೆ ಮುಂತಾದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ರಸ್ತೆ ಬದಿಯ ಬೀದಿ ನಾಯಿಗಳ ಗಣತಿ ಮಾಡಬೇಕಿತ್ತು. ಈಗಾಗಲೇ ಆ ಕಾರ್ಯ ಮುಗಿದಿದ್ದು ಟ್ಟು 8,598 ಸಂಸ್ಥೆಗಳ ಆವರಣದಲ್ಲಿ 22,130 ಬೀದಿ ನಾಯಿಗಳಿರುವುದು ಪತ್ತೆಯಾಗಿದೆ. ಈಗಾಗಲೇ ಇವುಗಳನ್ನು ಶೆಲ್ಟರ್ ಹೌಸ್‌ಗೆ ಸ್ಥಳಾಂತರಿಸಲು ಯೋಜನೆ ರೂಪಿಸುತ್ತಿದ್ದೇವೆ ಎಂದು ಹೇಳಿದರು.