ಆಸಕ್ತಿಯಿಂದ ಆವಿಷ್ಕಾರ ಸಾಧ್ಯ

ಐನಾಪುರ ಶಾಂತಿಸಾಗರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನವನ್ನು ಮೋಹನ್ ಮುತಾಲಿಕ್ ಉದ್ಘಾಟಿಸಿದರು. ಭರತ್ ಟೋನೆ, ಅರುಣ ಗಾಣಿಗೇರ, ಅನುಪ ಶೆಟ್ಟಿ ಇತರರಿದ್ದರು.
ಐನಾಪುರ ಶಾಂತಿಸಾಗರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ವಸ್ತುಪ್ರದರ್ಶನವನ್ನು ಮೋಹನ್ ಮುತಾಲಿಕ್ ಉದ್ಘಾಟಿಸಿದರು. ಭರತ್ ಟೋನೆ, ಅರುಣ ಗಾಣಿಗೇರ, ಅನುಪ ಶೆಟ್ಟಿ ಇತರರಿದ್ದರು.
Published on
ಐನಾಪುರ: ಯಾವುದೇ ಸಂಶೋಧನೆಗಳು ಹಣದಿಂದ ಆಗುವುದಿಲ್ಲ ಆಸಕ್ತಿ ಇದ್ದರೆ ಮಾತ್ರ ದೊಡ್ಡ ಆವಿಷ್ಕಾರಗಳು ಸಾಧ್ಯ ಎಂದು ಕಾಗವಾಡ ಶೈಕ್ಷಣಿಕ ವಲಯದ ಬಿ.ಆರ್.ಪಿ ಭರತ ಟೊಣಗೆ ಹೇಳಿದರು.
ತಾಲ್ಲೂಕಿನ ಐನಾಪುರ ಪಟ್ಟಣದ ಶಾಂತಿಸಾಗರ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಹಾರಮೇಳ ಮತ್ತು ವಿಜ್ಞಾನ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು. ಇಂತಹ ಸ್ಪರ್ಧೆಗಳು ಸೃಜನಶೀಲತೆ, ಕೌಶಲ ಹಾಗೂ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತವೆ ಎಂದರು.
ಪ್ರಗತಿ ಪರ ರೈತ ಮೋಹನ ಮುತಾಲಿಕ ಮಾತನಾಡಿ, ವಿಜ್ಞಾನಮೇಳ, ಆಹಾರ ಹಬ್ಬದಂತಹ ಕಾರ್ಯಕ್ರಮಗಳು ಶಾಲಾ ಮಕ್ಕಳ ಜ್ಞಾನ ವೃದ್ಧಿ ಮಾಡುವ ಜತೆಗೆ ಹೊರ ಪ್ರಪಂಚದ ವ್ಯವಹಾರಿಕ ಪರಿಜ್ಞಾನವನ್ನು ಕಟ್ಟಿಕೊಡುತ್ತವೆ ಎಂದರು.
ಸಂಸ್ಥೆಯ ಅಧ್ಯಕ್ಷ ಅರುಣ ಗಾಣಿಗೇರ ಮಾತನಾಡಿದರು. ಸಿಆರ್‌ಸಿ ಎ.ಎಸ್.ಖೋತ, ಪಪಂ ಸದಸ್ಯ ಪ್ರವೀಣ ಗಾಣಿಗೇರ, ಸಂಸ್ಥೆ ಆಡಳಿತ ಮಂಡಳಿ ಉಪಾದ್ಯಕ್ಷ ಪಾಯಪ್ಪಾ ಕುಡವಕ್ಕಲಿಗ, ಸದಸ್ಯರಾದ ಅನುಪ ಶೆಟ್ಟಿ, ಅಪ್ಪಾಸಾಬ ಚೌಗಲಾ, ರಾಮು ಪಾವಲಿ, ಶಿವಾನಂದ ಕಮತಗಿ, ಕಾಳಪ್ಪಾ ಬಡಿಗೇರ, ಮುಖ್ಯಶಿಕ್ಷಕ ಬಿ.ಜಿ ಮೋಳೆಕರ, ಶಿಕ್ಷಕಿ ಕವಿತಾ ದೇಸಾಯಿ, ಸರಸ್ವತಿ ದಾನೊಳ್ಳಿ, ವಿನಾಯಕ ಕಾಂಬಳೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net