ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯಲಿ

ಬೆಳಗಾವಿಯ ಮಹಾವೀರ ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಜೆ.ಮಂಜಣ್ಣ, ವಿನೋದ ಪಾಟೀಲ, ಮಹಾವೀರ ಹರದಿ, ಎ.ಬಿ.ಪಾಟೀಲ, ಜೆ.ಎ.ಸವದತ್ತಿ, ಪ್ರೊ.ರವಿ ದಂಡಗಿ ಇತರರಿದ್ದರು.
ಬೆಳಗಾವಿಯ ಮಹಾವೀರ ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿ ಒಕ್ಕೂಟವನ್ನು ಗಣ್ಯರು ಉದ್ಘಾಟಿಸಿದರು. ಪ್ರೊ.ಜೆ.ಮಂಜಣ್ಣ, ವಿನೋದ ಪಾಟೀಲ, ಮಹಾವೀರ ಹರದಿ, ಎ.ಬಿ.ಪಾಟೀಲ, ಜೆ.ಎ.ಸವದತ್ತಿ, ಪ್ರೊ.ರವಿ ದಂಡಗಿ ಇತರರಿದ್ದರು.
Published on

ಕಾಗವಾಡ:

ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ಪಡೆದು ಗುರು&ಹಿರಿಯರಿಗೆ ಗೌರವ ನೀಡಬೇಕು. ಗ್ರಾಮೀಣ ಕ್ರೀಡೆಗಳು, ಜನಪದ ಕಲೆಗಳನ್ನು ಜಿವಂತವಾಗಿಡಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ನಾಯಕತ್ವದ ಗುಣ ಬೆಳಸಿಕೊಳ್ಳಬೇಕೆಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಪ್ರೊ.ಜೆ.ಮಂಜಣ್ಣ ಹೇಳಿದರು.

ಬೆಳಗಾವಿ ಎಸ್​ಎಸ್​ಎಸ್​ ಸಮಿತಿ, ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ವಿದ್ಯಾರ್ಥಿ ಒಕ್ಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಸ್​ಎಸ್​ಎಸ್​ ಕಾರ್ಯಕಾರಿ ಸಮಿತಿ ಅಧ್ಯಕ್ಷ ವಿನೋದ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕೌಶಲಗಳನ್ನು ಬೆಳೆಸಿಕೊಂಡು, ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ, ವ್ಯಕ್ತಿತ್ವ ವಿಕಸಿಸಿಕೊಳ್ಳಬೇಕು ಎಂದು ಹೇಳಿದರು.
ವಿವಿಧ ವಿಷಯಗಳಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಆಡಳಿತ ಮಂಡಳಿ ಸದಸ್ಯರಾದ ಮಹಾವೀರ ಹರದಿ, ಎ.ಬಿ.ಪಾಟೀಲ, ಜೆ.ಎ.ಸವದತ್ತಿ, ಪ್ರಾಂಶುಪಾಲ ಪ್ರೊ.ರವಿ ದಂಡಗಿ, ಉಪ ಪ್ರಾಂಶುಪಾಲ ಡಾ.ಭರತ ಅಲಸಂದಿ, ಪಿಯು ಕಾಲೇಜು ಪ್ರಾಂಶುಪಾಲ ಪ್ರೊ.ವಿ.ಬಿ.ತುರಮರಿ ಐಕ್ಯೂಎಸಿ ಸಹ ಸಂಯೋಜಕಿ ನಾಗವೇಣಿ ಧರೆಣ್ಣವರ, ಪ್ರೊ.ನಿರ್ಮಲಾ ಗಡಾದ, ಸೋನಾಲಿ ಆಳಪ್ಪನವರ, ಡಾ.ಅನುರಾಧಾ ಕಂಚಿ, ವಿದ್ಯಾರ್ಥಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಾಗರ ರಾಯಣ್ಣಗೌಡರ, ಜಂಟಿ ಪ್ರಧಾನ ಕಾರ್ಯದರ್ಶಿ ಅಪೇಾ ಶೆಟ್ಟಿ ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net