ಸರ್ಕಾರದ ಪ್ರಸ್ತಾವ ಹಿಂಪಡೆಯಲು ಒತ್ತಾಯ

ರಾಯಬಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀಪತಿ ಪಿ.ಕೆ. ಅವರು ಹೊರಡಿಸಿದ ಪ್ರಸ್ತಾವ ಹಿಂಪಡೆಯಲು ಸರ್ಕಾರವನ್ನು ಒತ್ತಾಯಿಸುವಂತೆ ಡಿ.ಎಂ.ಐಹೊಳೆಯವರಿಗೆ ರಾಜ್ಯ ಎನ್‌ಎಚ್‌ಎಂ ಗುತ್ತಿಗೆ ನೌಕರರ ಸಮನ್ವಯ ಸಮಿತಿಯವರು ಮನವಿ ಸಲ್ಲಿಸಿದರು. ಡಾ.ಸುರೇಶ ಪಾಟೀಲ, ಡಾ.ಲಕ್ಷ್ಮೀ ಸಂಜುಗೋಳ ಇತರರಿದ್ದರು.

Published on
ರಾಯಬಾಗ: ಆರೋಗ್ಯ ಇಲಾಖೆಯ 30 ಸಾವಿರ ಸಿಬ್ಬಂದಿಗೆ ಮಾರಕವಾಗುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಶ್ರೀಪತಿ ಪಿ.ಕೆ. ಅವರು ಹೊರಡಿಸಿದ ಪ್ರಸ್ತಾವ ಹಿಂಪಡೆಯಲು ಸರ್ಕಾರಕ್ಕೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಒತ್ತಾಯಿಸುವಂತೆ ಶಾಸಕ ಡಿ.ಎಂ.ಐಹೊಳೆಯವರಿಗೆ ಶನಿವಾರ ಪಟ್ಟಣದ ಶಾಸಕರ ಗೃಹಕಚೇರಿಯಲ್ಲಿ ರಾಜ್ಯ ಎನ್‌ಎಚ್‌ಎಂ ಗುತ್ತಿಗೆ ನೌಕರರ ಸಮನ್ವಯ ಸಮಿತಿಯವರು ಮನವಿ ಸಲ್ಲಿಸಿದರು.
ಆರೋಗ್ಯ ಇಲಾಖೆಯಲ್ಲಿ ಕಳೆದ 18-20 ವರ್ಷಗಳಿಂದ ಅತ್ಯಂತ ಕಡಿಮೆ ವೇತನದಲ್ಲಿ ಎನ್‌ಎಚ್‌ಎಂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಲಾಗುತ್ತಿದೆ. ಆರೋಗ್ಯ ನೌಕರರ ಭವಿಷ್ಯ ಮತ್ತು ಭದ್ರತೆಗೆ ಮಾರಕವಾಗಿರುವ ಮರು ನೇಮಕಾತಿ ಮಾನವ ಸಂಪನ್ಮೂಲ ಪ್ರಸ್ತಾವ ಕೈಬಿಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಡಾ.ಸುರೇಶ ಪಾಟೀಲ, ಡಾ.ಲಕ್ಷ್ಮೀ ಸಂಜುಗೋಳ, ಡಾ.ಶಶಿಕಲಾ ಚೌಗಲಾ, ಡಾ.ಭಾರತಿ ಮಾರಡಿ, ಗೀತಾ ಹಿರೇಕೊಡಿ, ಮಂಜುನಾಥ ಜಾಧವ, ಶರಣಬಸಯ್ಯ ಹೀರೆಮಠ, ಸವಿತಾ ಚೌಗಲಾ, ನಾಗಿಣಿ ಕಾಂಬಳೆ, ಕವಿತಾ ಶಿಂಗೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net