ಸಿಸಿ ಕ್ಯಾಮರಾ ಸ್ಥಳಾಂತರಿಸುವಂತೆ ಆಗ್ರಹಿಸಿ ಎಎಸ್‌ಐಗೆ ಎಂ.ಕೆ.ಹುಬ್ಬಳ್ಳಿ ದಸಂಸ ಪದಾಧಿಕಾರಿಗಳು ಹಾಗೂ ರೈತರು ಮನವಿ ಸಲ್ಲಿಸಿದರು. ರಾಜಶೇಖರ ಹಿಂಡಲಗಿ, ಭೀಮಪ್ಪ ಗುಡೆನ್ನವರ ಇತರರಿದ್ದರು.
Published on:
Copied
Follow Us
ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಹೆಚ್ಚಾಗಿ ರೈತಾಪಿ ಕುಟುಂಬಗಳಿರುವುದರಿಂದ ರೈತರು ಇದೇ ಮಾರ್ಗವಾಗಿ ಕೃಷಿ ಜಮೀನುಗಳಿಗೆ ತೆರಳುತ್ತಾರೆ. ಬ್ಯಾಂಕ್ ಸೇರಿ ಅಗತ್ಯ ದಿನಸಿ ಸಾಮಗ್ರಿಗಳನ್ನು ತರಲು ಹೆಚ್ಚಿನ ಜನರು ಇದೇ ಮಾರ್ಗ ಬಳಸುತ್ತಾರೆ. ಇಲ್ಲಿ ಎಐ ಆಧಾರಿತ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಬಹತೇಕ ರೈತರು ಮತ್ತು ಸ್ಥಳೀಯ ನಿವಾಸಿಗಳು ಸಾರಿಗೆ ನಿಮಯ ಪಾಲಿಸುತ್ತಿಲ್ಲ. ಹೆಲ್ಮೆಟ್ ಹಾಕಿಲ್ಲವೆಂಬ ಕಾರಣ ನೀಡಿ ದಂಡದ ನೊಟೀಸ್ ಬರುತ್ತಿವೆ.
ಇದರಿಂದ ಸ್ಥಳೀಯರಿಗೆ ಮತ್ತು ರೈತರಿಗೆ ತೊಂದರೆಯಾಗಿದ್ದು, ತಕ್ಷಣ ದಂಡ ಹಾಕುವುದನ್ನು ಸ್ಥಗಿತಗೊಳಿಸಿ, ರೈತರಿಗೆ ಹಾಗೂ ಸ್ಥಳೀಯರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕೆಂದು ಉಪಪೊಲೀಸ್ ಠಾಣೆ ಎಎಸ್‌ಐಗೆ ಸಮಿತಿ ಪದಾಧಿಕಾರಿಗಳು, ರೈತರು ಮತ್ತು ಸ್ಥಳೀಯ ನಿವಾಸಿಗಳು ಮನವಿ ಸಲ್ಲಿಸಿದರು.