ಅರಟಾಳ ಗ್ರಾಮಕ್ಕೆ ನೀರು ಹರಿಸಲು ಒತ್ತಾಯ

ಅರಟಾಳ ಗ್ರಾಮದ ತುಬಚಿ-ತುಂಗಳ ಏತ ನೀರಾವರಿ ಕಾಲುವೆಗೆ ನೀರು ಹರಿಸುವಂತೆ ರೈತರು ಆಗ್ರಹಿಸಿದರು. ಮಲ್ಲಿಕಾರ್ಜುನ ತೆಲಸಂಗ, ಪರಶು ಅರ್ಜುಣಗಿ, ಭೀಮಪ್ಪ ಹಟ್ಟಿ, ಭಾಗೇಶ ತೆಲಸಂಗ ಇತರರಿದ್ದರು.
ಅರಟಾಳ ಗ್ರಾಮದ ತುಬಚಿ-ತುಂಗಳ ಏತ ನೀರಾವರಿ ಕಾಲುವೆಗೆ ನೀರು ಹರಿಸುವಂತೆ ರೈತರು ಆಗ್ರಹಿಸಿದರು. ಮಲ್ಲಿಕಾರ್ಜುನ ತೆಲಸಂಗ, ಪರಶು ಅರ್ಜುಣಗಿ, ಭೀಮಪ್ಪ ಹಟ್ಟಿ, ಭಾಗೇಶ ತೆಲಸಂಗ ಇತರರಿದ್ದರು.
Published on

ತುಬಚಿ-ತುಂಗಳ ಮತ್ತು ಕರಿಮಸೂತಿ ಭಾಗದಲ್ಲಿ ಏತ ನೀರಾವರಿ ಕಾಲುವೆಗಳು ಇದ್ದರೂ ಅರಟಾಳ ಗ್ರಾಮಕ್ಕೆ ನೀರು ಬರುತ್ತಿಲ್ಲ. ಈ ಕುರಿತು ಅಧಿಕಾರಿಗಳಿಗೆ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಹೆಸರಿಗೆ ಮಾತ್ರ ಕಾಲುವೆಗಳು ಇದ್ದಂತಾಗಿವೆ ಎಂದು ಅರಟಾಳ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಹರಿಸಿದರೂ ಗ್ರಾಮಕ್ಕೆ ನೀರು ತಲುಪಿಲ್ಲ. ಗ್ರಾಮಕ್ಕೆ ಶೀಘ್ರ ನೀರು ಹರಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಒತ್ತಾಯಿಸಿದರು.

ನೀರಾವರಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ಪ್ರವೀಣ ಹುಣಸೀಕಟ್ಟಿ ಈ ಕುರಿತು ಪ್ರತಿಕ್ರಿಯಿಸಿ, ತುಬಚಿ-ತುಂಗಳ ಏತ ನೀರಾವರಿ ಕಾಲುವೆಗೆ ಹನ್ನೆರಡು ದಿನ ಪಾಳೆ ಕೊಟ್ಟಿದ್ದೇವೆ. ಅರಟಾಳ ಗ್ರಾಮಕ್ಕೆ ನೀರು ಬರದಿರುವ ಕುರಿತು ಯಾರೂ ತಿಳಿಸಿಲ್ಲ. ಮುಂದಿನ ಹತ್ತು ದಿನಗಳ ನಂತರ ಪಾಳೆಯಲ್ಲಿ ನೀರು ಬಿಡಲಾಗುವುದು ಎಂದು ತಿಳಿಸಿದರು.
ರೈತರಾದ ಮಲ್ಲಿಕಾರ್ಜುನ ತೆಲಸಂಗ, ಪರಶು ಅರ್ಜುಣಗಿ, ಭೀಮಪ್ಪ ಹಟ್ಟಿ, ಭಾಗೇಶ ತೆಲಸಂಗ, ಶ್ರೀಶೈಲ ಪೂಜಾರಿ, ಮಾಯಪ್ಪ ಪೂಜಾರಿ, ಶಿವಪ್ಪ ಪೂಜಾರಿ, ಮಾಳಪ್ಪ ಹಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net