ಬೆಳಗಾವಿ: ಸಮಾನ ಕೆಲಸಕ್ಕೆ ಸಮಾನ ವೇತನ, ಸೇವೆ ಕಾಯಂ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪರವಾನಗಿ ಭೂಮಾಪಕರ ಸಂಘ, ರಾಜ್ಯ ರೈತ ಸಂಘಟನೆ, ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ಬೆಳಗಾವಿ, ಕಲಬುರಗಿ ವಿಭಾಗೀಯ 12 ಜಿಲ್ಲೆಯ ಭೂಮಾಪಕರು, ರೈತ ಸಂಘಟನೆ ಕಾರ್ಯಕರ್ತರು ಸರ್ಕಾರದ ನಿರ್ಲಕ್ಷೃ ಧೋರಣೆ ವಿರುದ್ಧ ಘೋಷಣೆ ಕೂಗಿದರು.
ಭೂಮಾಪಕರನ್ನು ಎರಡು ದಶಕಗಳಿಂದ ದುಡಿಸಿಕೊಂಡು ಸೌಲಭ್ಯ ನೀಡದೆ ಅನ್ಯಾಯ ಮಾಡುತ್ತಿದೆ. ರೈತರಿಂದ ಸಾವಿರಾರು ಶುಲ್ಕ ಸಂಗ್ರಹಿಸಿ ಪರವಾನಗಿ ಭೂಮಾಪಕರಿಗೆ ಯಾವುದೇ ಶುಲ್ಕ ನೀಡುತ್ತಿಲ್ಲ. ರೈತರ ಜಮೀನಿನ ಹತ್ತಿರದ ಪ್ರಯಾಣ ದರ ನಾವೇ ಭರಿಸಿಕೊಳ್ಳಬೇಕು. ಯಾವುದೇ ಭದ್ರತೆ, ಸೌಲಭ್ಯ ಇಲ್ಲ. 26 ವರ್ಷಗಳಿಂದ ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಭೂಮಾಪಕರಿಗೆ 52 ಸಾವಿರ ರೂ. ವೇತನ ಇದೆ. ಪರವಾನಗಿ ಭೂಮಾಪಕರಿಗೆ 12 ಸಾವಿರ ರೂ. ಸಂಭಾವನೆ ಇದ್ದು, ಜೀವನ ನಡೆಸುವುದು ಕಷ್ಟವಾಗಿದೆ. ತಕ್ಷಣ ನಮ್ಮ ಬೇಡಿಕೆಗೆ ಸ್ಪಂದಿಸಬೇಕು. ಇಲ್ಲವಾದರೆ ಬೆಂಗಳೂರಲ್ಲಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಚೂನಪ್ಪ ಪೂಜೇರಿ, ಪ್ರೇಮ ಚೌಗಲಾ, ಮಹೇಶ ಸುಬೇದಾರ,
ಭೂಮಾಪಕರ ಸೇವೆ ಕಾಯಂ ಮಾಡಿಕೊಳ್ಳಬೇಕು. ಗ್ಯಾರಂಟಿ ಯೋಜನೆ ಬಂದ್ ಮಾಡಿ ಯುವ ಸಮುದಾಯಕ್ಕೆ ಉದ್ಯೋಗ ಕಲ್ಪಿಸಿಕೊಡಬೇಕು. ಇಲ್ಲದಿದ್ದರೆ 31 ಜಿಲ್ಲೆಗಳಿಂದ ಲಕ್ಷಾಂತರ ರೈತರಿಂದ ಬೆಂಗಳೂರು ನಗರದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ.