ಡಿಸಿಸಿ ಬ್ಯಾಂಕ್​ ನಿರ್ದೇಶಕರ ಅನರ್ಹಗೊಳಿಸಲು ಆಗ್ರಹ

ಸಿಎಂಗೆ ಪತ್ರ ಬರೆದ ಭೀಮಪ್ಪ ಗಡಾದ
ಸಿಎಂಗೆ ಪತ್ರ ಬರೆದ ಭೀಮಪ್ಪ ಗಡಾದ
Published on
ಬೆಳಗಾವಿ: ರಾಜ್ಯದ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್​ (ಡಿಸಿಸಿ)ಗಳಲ್ಲಿ ನಿರ್ದೇಶಕರಾಗಿ 10 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿರುವವರನ್ನು ಅನರ್ಹಗೊಳಿಸಲು ಆರ್​ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಿಸರ್ವ್​ ಬ್ಯಾಂಕ್​ ಕಾಯ್ದೆ ಅನ್ವಯ ಸಹಕಾರ ಬ್ಯಾಂಕ್​ಗಳಲ್ಲಿ 10 ವರ್ಷ ಮಾತ್ರ ನಿರ್ದೇಶಕರಾಗಿರಲು ಅವಕಾಶವಿದೆ. ಈ ಹಿನ್ನೆಲೆ 10 ವರ್ಷಕ್ಕಿಂತ ಮೇಲ್ಪಟ್ಟ ನಿರ್ದೇಶಕರನ್ನು ಅರ್ನಹಗೊಳಿಸಲು ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ಈಚೆಗೆ ಆಯ್ಕೆಯಾಗಿರುವ ನಿರ್ದೇಶಕರ ಪೈಕಿ 7 ಜನರು ಹತ್ತು ವರ್ಷಕ್ಕಿಂತ ಹೆಚ್ಚು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಅವರ ಸ್ಥಾನ ಅನರ್ಹಗೊಳಿಸಲು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net