ಕೇಂದ್ರ ಸರ್ಕಾರದ ತುಟ್ಟಿಭತ್ಯೆ ಸ್ಥಗಿತಗೊಳಿಸಬಾರದು ಎಂದು ಆಗ್ರಹಿಸಿ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘ ಹಾಗೂ ಅಖಿಲ ಭಾರತ ನಿವೃತ್ತ ನೌಕರರ ಒಕ್ಕೂಟದ ವತಿಯಿಂದ ಸವದತ್ತಿಯಲ್ಲಿ ಶಿರೆಸ್ತೆದಾರ್ ಶಶಿಧರ ವನಕಿಗೆ ಮನವಿ ಸಲ್ಲಿಸಲಾಯಿತು. ಬಿ.ವಿ.ವಾಂಗೆ ವಿ.ಎನ್.ಮುನವಳ್ಳಿ, ಗಿರೀಶ ಮುನೋಳಿ ಇತರರಿದ್ದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ವಿ.ವಾಂಗಿ ಮಾತನಾಡಿ, ಸರ್ಕಾರಿ ನೌಕರರು ಮತ್ತು ಕುಟುಂಬ ಪಿಂಚಣಿದಾರರು ಜೀವನೋಪಾಯಕ್ಕೆ ಅವಶ್ಯವಾಗಿರುವ ತುಟ್ಟಿಭತ್ಯೆ ಸ್ಥಗಿತಗೊಳಿಸುವುದು ನ್ಯಾಯಸಮ್ಮತವಲ್ಲ. ಈ ಕುರಿತು ಸರ್ಕಾರ ಕೂಡಲೇ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.