ಹಕ್ಕುಪತ್ರ ವಿತರಣೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾನಾಪುರ ಗಾಂಧಿ ನಗ 3ನೇ ಅಡ್ಡ ರಸ್ತೆಯ ವಾರ್ಡ್ ನಂ.2ರ ವ್ಯಾಪ್ತಿಯ ಭಂಗಿಬೋಳ ನಿವಾಸಿಗಳು ಸೋಮವಾರ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಕರುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಚನ್ನಮ್ಮ ವೃತ್ತದಿಂದ ಜಿಪಂ ಕಚೇರಿಗೆ ರ‌್ಯಾಲಿ ಮೂಲಕ ಆಗಮಿಸಿದ ನಿವಾಸಿಗಳು, ಸೂಕ್ತ ಹಕ್ಕುಪತ್ರಗಳಿಲ್ಲದೇ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಆದಷ್ಟು ಬೇಗ, ಪೂರಕ ಹಕ್ಕು ಪತ್ರಗಳನ್ನು ಒದಗಿಸುವಂತೆ ಜಿಪಂ ಸಿಇಒ ರಾಹುಲ ಶಿಂಧೆಗೆ ಮನವಿ ಸಲ್ಲಿಸಿದರು.
ಈ ಪ್ರದೇಶ ಹಲಕರ್ಣಿ ಗ್ರಾಪಂ ವ್ಯಾಪ್ತಿಗೆ ಬರುತ್ತದೆ. ಈಗಾಗಲೇ ಅನೇಕರಿಗೆ ಗ್ರಾಪಂದಿಂದ ಕೆಲವರಿಗೆ ಅನುಕೂಲ ಮಾಡಿಕೊಡಲಾಗಿದೆ. ಆದರೆ ಕೆಲವು ಕುಟುಂಬಗಳನ್ನು ಮಾತ್ರ ನಿರ್ಲಕ್ಷೃ ಮಾಡಲಾಗುತ್ತಿದ್ದು, ಪಹಣಿ ಸೇರಿದಂತೆ ಯಾವುದನ್ನೂ ನೀಡುತ್ತಿಲ್ಲ. ಇದರಿಂದ ವಿದ್ಯುತ್ ಸಂಪರ್ಕವನ್ನೂ ಪಡೆಯುಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.