ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಬೆಳಗಾವಿಯಲ್ಲಿ ಸೋಮವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ಮತ್ತು ರೈತರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿದರು. ದೊಡ್ಡವ್ವ ಪೂಜಾರಿ, ಜಿ.ಎಂ.ಜೈನೆಖಾನ್, ಚನ್ನಮ್ಮ ಗಡ್ಕರಿ, ಮಂದಾ ನೇವಗಿ ಇತರರಿದ್ದರು.
ಬೆಳಗಾವಿಯಲ್ಲಿ ಸೋಮವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು ಮತ್ತು ರೈತರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿದರು. ದೊಡ್ಡವ್ವ ಪೂಜಾರಿ, ಜಿ.ಎಂ.ಜೈನೆಖಾನ್, ಚನ್ನಮ್ಮ ಗಡ್ಕರಿ, ಮಂದಾ ನೇವಗಿ ಇತರರಿದ್ದರು.
Published on

ಬೆಳಗಾವಿ :

ರೈತರ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಸೋಮವಾರ ವಿವಿಧ ವಲಯದ ಕಾರ್ಮಿಕರು ಹಾಗೂ ಕೃಷಿಕರು ಡಾ.ಬಿ.ಆರ್.ಅಂಬೇಡ್ಕರ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು.

ರ‌್ಯಾಲಿ ಬಳಿಕ ಡಿಸಿ ಕಚೇರಿ ಎದುರು ಕೆಲಹೊತ್ತು ಪ್ರತಿಭಟನೆ ನಡೆಸಿ, ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬಲವಂತದ ಹಾಗೂ ಅನ್ಯಾಯದ ಮೂಲಕ ಯಾವುದೇ ಯೋಜನೆಗೆ ಭೂಸ್ವಾಧೀನ ಮಾಡಬಾರದು. ಕಾರ್ಪೋರೇಟ್ ವಲಯಕ್ಕಾಗಿ ಭೂ ಕಬಳಿಸುವುದು ನಿಲ್ಲಬೇಕು. ಹೊಸ ಕಾರ್ಮಿಕ ಸಂಹಿತೆ ಜಾರಿ ಮಾಡಬಾರದು. ಪರಿಷ್ಕರಿಸಿದ ಅಧಿಸೂಚನೆಯನ್ವಯ ಹೊಸ ವೇತನ ಪದ್ಧತಿ ಜಾರಿಯಾಗಬೇಕು. ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಬೇಕು. ವಿದ್ಯುತ್ ತಿದ್ದುಪಡಿ ಕಾಯ್ದೆ-2025 ವಾಪಸ್ ಪಡೆಯಬೇಕು. ಬೆಲೆ ಏರಿಕೆ ನಿಯಂತ್ರಣದಲ್ಲಿಡಬೇಕು. ಐಸಿಡಿಎಸ್, ಅಕ್ಷರ ದಾಸೋಹ ಹಾಗೂ ಇನ್ನಿತರ ಯೋಜನೆಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ದೊಡ್ಡವ್ವ ಪೂಜಾರಿ, ದಿಲೀಪ ವಾರ್ಕೆ, ಜಿ.ಎಂ.ಜೈನೆಖಾನ್, ಚನ್ನಮ್ಮ ಗಡ್ಕರಿ, ಜಿತೇಂದ್ರ ಕಾಗನಕರ, ಗೋದಾವರಿ ರಾಜಾಪುರೆ, ನಾಗಪ್ಪ ಸಂಗೊಳ್ಳಿ, ಮಂದಾ ನೇವಗಿ, ತುಳಸಮ್ಮ ಮಾಳದಕರ, ಪಾರ್ವತಿ ಕೌಜಲಗಿ, ರಾಜು ಪಾಟೀಲ, ಮಾರುತಿ ಮುದಗುರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net