ಬೈಲಹೊಂಗಲ ಬರಪೀಡಿತ ಘೋಷಿಸಿ

ಬೈಲಹೊಂಗಲ ಸೇರಿ ಸುತ್ತಲಿನ 5 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಬಿಜೆಪಿ ಮಂಡಲ ವತಿಯಿಂದ ಎಸಿಗೆ ಮನವಿ ಸಲ್ಲಿಸಲಾಯಿತು. ಜಗದೀಶ ಬೂದಿಹಾಳ, ಗುರು ಮೆಟಗುಡ್ಡ, ಸುಭಾಸ ತುರಮರಿ, ಅಶೋಕ ಇಂಗಳಗಿ ಇತರರಿದ್ದರು.
ಬೈಲಹೊಂಗಲ ಸೇರಿ ಸುತ್ತಲಿನ 5 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಬಿಜೆಪಿ ಮಂಡಲ ವತಿಯಿಂದ ಎಸಿಗೆ ಮನವಿ ಸಲ್ಲಿಸಲಾಯಿತು. ಜಗದೀಶ ಬೂದಿಹಾಳ, ಗುರು ಮೆಟಗುಡ್ಡ, ಸುಭಾಸ ತುರಮರಿ, ಅಶೋಕ ಇಂಗಳಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ಮಂಡಲ ವತಿಯಿಂದ ಆಗ್ರಹ
  • ಉಪವಿಭಾಗಾಧಿಕಾರಿಗೆ ಮನವಿ
ಬೈಲಹೊಂಗಲ:

ಚನ್ನಮ್ಮನ ಕಿತ್ತೂರು, ಸವದತ್ತಿ, ಗೋಕಾಕ, ಯರಗಟ್ಟಿ, ರಾಮದುರ್ಗ ಹಾಗೂ ಬೈಲಹೊಂಗಲ ತಾಲೂಕುಗಳನ್ನು ಬರಪೀಡಿತ ತಾಲೂಕು ಪಟ್ಟಿಯಿಂದ ಕೈಬಿಟ್ಟಿರುವುದನ್ನು ಖಂಡಿಸಿ ಬಿಜೆಪಿ ಮಂಡಲ ವತಿಯಿಂದ ಎಸಿ ಪ್ರವೀಣ

ಜೈನ್‌ಗೆ ಶನಿವಾರ ಮನವಿ ಸಲ್ಲಿಸಲಾಯಿತು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಗದೀಶ ಬೂದಿಹಾಳ ಮಾತನಾಡಿ, ಈ ಭಾಗದ ಬಹುತೇಕ ಗ್ರಾಮಗಳ ರೈತರಿಗೆ ಕೃಷಿಯೇ ಪ್ರಮುಖ ಜೀವನಾಧಾರವಾಗಿದ್ದು, ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಹದಗೆಟ್ಟಿವೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಇಂತಹ ಪರಿಸ್ಥಿತಿಯಲ್ಲಿ ಈ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ರೈತರಿಗೆ ಮಾಡಿರುವ ಅನ್ಯಾಯವಾಗಿದೆ. ಇದರಿಂದ ರೈತರಿಗೆ ದೊರೆಯಬೇಕಾದ ಬರ ಪರಿಹಾರ, ಬೆಳೆ ನಷ್ಟ ಪರಿಹಾರ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗುವ ಆತಂಕ ಎದುರಾಗಿದೆ ಎಂದು ತಿಳಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗುರು ಮೆಟಗುಡ್ಡ, ಮಂಡಲ ಅಧ್ಯಕ್ಷ ಸುಭಾಸ ತುರಮರಿ ಮಾತನಾಡಿ, ಸಂಬಂಧಿತ ಅಧಿಕಾರಿಗಳು ವಾಸ್ತವ ಸ್ಥಿತಿ ಪರಿಶೀಲಿಸಿ, ರೈತರ ಸಂಕಷ್ಟ ಕುರಿತು ಸರ್ಕಾರದ ಗಮನಕ್ಕೆ ತರಬೇಕು. ರೈತರ ಹಿತದೃಷ್ಟಿಯಿಂದ ಮೇಲ್ಕಂಡ ತಾಲೂಕುಗಳನ್ನು ತಕ್ಷಣವೇ ಬರಪೀಡಿತ ತಾಲೂಕುಗಳ ಪಟ್ಟಿಗೆ ಮರುಸೇರ್ಪಡೆ ಮಾಡಲು ಸರ್ಕಾರಕ್ಕೆ ಶಿಾರಸು ಮಾಡಬೇಕು.
ಇಲ್ಲದ್ದಿದ್ದರೆ, ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಹಡಪದ, ಜಿಲ್ಲಾ ಮಾಧ್ಯಮ ಪ್ರಮುಖ ಸಚಿನ ಕಡಿ, ಮುಖಂಡರಾದ ಆನಂದ ಬೂದಿಹಾಳ, ಅಶೋಕ ಇಂಗಳಗಿ, ಆನಂದ ಏಣಗಿ, ರಮೇಶ ಕಮ್ಮಾರ, ಪ್ರವೀಣ ಶಿಂಗಾರಿ, ರಾಜು ಗುಡಿಮನಿ, ರಮೇಶ ಹುರಳಿ, ಶ್ರೀಕಾಂತ ಬೂದಿಹಾಳ, ಶಿವಾನಂದ ಇಂಚಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net