ನಕಲಿ ವ್ಯಕ್ತಿತ್ವ ಆಸ್ತಿ ವ್ಯವಹಾರಗಳ ವಂಚನೆ ತಡೆಗೆ ಕ್ರಮ

ಮೊಹಮ್ಮದ್ ರೋಷನ್
ಮೊಹಮ್ಮದ್ ರೋಷನ್
Published on
ಬೆಳಗಾವಿ: ಜಿಲ್ಲೆಯಲ್ಲಿ ಆಸ್ತಿ ನೊಂದಣಿ ಪ್ರಕ್ರಿಯೆಯಲ್ಲಿ ನಕಲಿ ವ್ಯಕ್ತಿತ್ವ ಧಾರಣೆ, ನಕಲಿ ದಾಖಲೆಗಳ ಮೂಲಕ ಆಸ್ತಿ ವರ್ಗಾವಣೆ, ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಗಳ ಅನಧಿಕೃತ ನೋಂದಣಿ ಪ್ರಕರಣಗಳು ಜರಗುತ್ತಿರುವುದು ಕಂಡು ಬಂದಿದ್ದು, ವಂಚನೆಗಳನ್ನು ತಡೆಗಟ್ಟಲು ಆಧಾರ ದೃಢೀಕರಣ ಕಡ್ಡಾಯಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸರುತ್ತಾರೆ.
ಆಧಾರ ಆಧಾರಿತ ದೃಡೀಕರಣ ವ್ಯಕ್ತಿತ್ವದ ಪರಿಶೀಲನೆ, ನಕಲಿ ವ್ಯಕ್ತಿತ್ವದ ತಡೆಗಟ್ಟುವಿಕೆ ವಂಚನಾ ವ್ಯವಹಾರಗಳನ್ನು ತಡೆಗಟ್ಟಲು ಸಹಯಕವಾಗುತ್ತದೆ. ಸದರಿ ಆದೇಶವನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶದಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net