ಪ್ರಗತಿಪಥದಲ್ಲಿ ದರೂರ ಕೋರೆ ಸೊಸೈಟಿ

ದರೂರ ಗ್ರಾಮದ ಡಾ.ಪ್ರಭಾಕರ ಕೋರೆ ಸೊಸೈಟಿಯ ೩ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಿದಗೊಂಡ ಗುಮತಾಜ, ರವೀಂದ್ರ ಕರೋಶಿ, ಪ್ರಧಾನಿ ಕುಂಬಾರ ಇತರರಿದ್ದರು.
ದರೂರ ಗ್ರಾಮದ ಡಾ.ಪ್ರಭಾಕರ ಕೋರೆ ಸೊಸೈಟಿಯ ೩ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಿದಗೊಂಡ ಗುಮತಾಜ, ರವೀಂದ್ರ ಕರೋಶಿ, ಪ್ರಧಾನಿ ಕುಂಬಾರ ಇತರರಿದ್ದರು.
Published on
ಅಥಣಿ: ಅಂಕಲಿಯ ಡಾ.ಪ್ರಭಾಕರ ಕೋರೆ ಕೋ-ಆಫ್ ಕ್ರೆಡಿಟ್ ಸೊಸೈಟಿಯ ದರೂರ ಶಾಖೆ ಒಟ್ಟು ೫.೨೫ ಕೋಟಿ ರೂ. ಠೇವಣಿ ಸಂಗ್ರಹಿಸಿ ೨.೯೦ ಕೋಟಿ ರೂ. ಸಾಲ ವಿತರಿಸಿ ೬.೧೧ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಶಾಖೆ ಅಧ್ಯಕ್ಷ ಶಿದಗೊಂಡ ಗುಮತಾಜ ಹೇಳಿದರು.
ತಾಲೂಕಿನ ದರೂರ ಗ್ರಾಮದಲ್ಲಿ ಸೊಸೈಟಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೩ನೇ ವಾರ್ಷಿಕೋತ್ಸವ ಮತ್ತು ೫ ಕೋಟಿ ರೂ. ಠೇವಣಿ ಸಂಗ್ರಹಣೆ ಸಂಕಲ್ಪ ಪೂರ್ತಿ ಸಮಾರಂಭದಲ್ಲಿ ಮಾತನಾಡಿದರು. ಶಾಖೆ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಎಲ್ಲ ಗ್ರಾಹಕರು, ಸದಸ್ಯರ ಸಹಕಾರವೇ ಕಾರಣವಾಗಿದೆ ಎಂದರು.
ಬಾವನಸೌಂದತ್ತಿಯ ಶಿವಶಕ್ತಿ ಶುಗರ್ಸ್ ಮತ್ತು ಚಿಕ್ಕೋಡಿಯ ಚಿದಾನಂದ ಕೋರೆ ಸಹಕಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸಿದ ದರೂರ ಗ್ರಾಮದ ಸುತ್ತಮುತ್ತಲಿನ ರೈತರ ಖಾತೆಗೆ ಬಿಲ್ ತ್ವರಿತವಾಗಿ ಪಾವತಿಸಿ ವಿಶ್ವಾಸ ಗಳಿಸಿದ್ದೇವೆ. ಶಾಖೆಯಲ್ಲಿ ಆರ್‌ಟಿಜಿಎಸ್, ನೆಫ್ಟ್, ಠೇವು ಸಂಗ್ರಹ, ಸಾಲ ವಿತರಣೆ, ವಾಹನ ವಿಮೆ ಹಾಗೂ ಜೀವ ವಿಮೆಯಂಥ ವಿವಿಧ ಸೇವೆಗಳಿವೆ ಎಂದರು.
ಶಾಖೆಯಲ್ಲಿ ಮಹಾಲಕ್ಷ್ಮಿ ಪೂಜೆ ಜರುಗಿತು. ಆಡಳಿತ ಕಚೇರಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರೋಶಿ, ಶಾಖಾ ಅಭಿವೃದ್ಧಿ ಅಧಿಕಾರಿ ಪ್ರಧಾನಿ ಕುಂಬಾರ, ಶಾಖೆ ಸಲಹಾ ಸಮಿತಿ ಸದಸ್ಯರಾದ ಶಿವಗೌಡ ಬಸಗೌಡರ, ಬಸವರಾಜ ಮಠದ, ಮಲ್ಲಪ್ಪ ಚೌಗಲಾ, ಬ್ರಹ್ಮಕುಮಾರ ಮದಭಾವಿ, ಸಿದ್ದಣ್ಣ ಅಥಣಿ, ಪರಗೌಡ ಪಾಟೀಲ, ಮಹಾದೇವ ಜಾಬಗೌಡರ, ಪ್ರಕಾಶ ಪಾಟೀಲ, ರಮೇಶ ಪಾಟೀಲ, ಚೆನ್ನಪ್ಪ ಹೊಸೂರ, ಅಮಿತ ಗೌಡಪ್ಪನವರ, ಶಾಖಾ ವ್ಯವಸ್ಥಾಪಕ ಸುರೇಶ ಕಬಾಡಗಿ, ಸಿಬ್ಬಂದಿ ಹಾಗೂ ಗ್ರಾಹಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net