ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ರೈತ ನಾಗಪ್ಪ ಸತ್ತಿಗೇರಿ ಅವರ ಬಾವಿಯಲ್ಲಿ ಕಾಣಿಸಿಕೊಂಡಿದ್ದ ಮೊಸಳೆಯನ್ನು ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದು ಬೆಳಗಾವಿ ಸಮೀಪದ ಭೂತರಾಮನಹಟ್ಟಿ ಮೃಗಾಲಯಕ್ಕೆ ಸ್ಥಳಾಂತರಿಸಿದರು.
ಇನ್ನೊಂದು ಮೊಸಳೆಯನ್ನು ಶೀಘ್ರ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದರು. ಅರಣ್ಯ ಇಲಾಖೆ ಅಧಿಕಾರಿ ಹುಸೇನಸಾಬ್ ಪನಾಳಗಡ, ಸೋಮನಿಂಗಪ್ಪ ಅಂಬಿಗರ, ಬಸವರಾಜ ಸುಣಗಾರ, ಶಿವಪ್ರಸಾದ ತೇಗೂರ, ರಾಜು ಬಸಿಡೋಣಿ ಸೇರಿದಂತೆ ಗ್ರಾಮದ ಯುವಕರು ಇದ್ದರು.