ಹಲ್ಲೆ ಪ್ರಕರಣ: ಶಾಸಕ ಸವದಿ ವಿರುದ್ಧ ದೂರು ದಾಖಲು

ಬಿಡಿಸಿಸಿ ಬ್ಯಾಂಕ್ ನೌಕರರನ ಮೇಲೆ ಹಲ್ಲೆ
ಬಿಡಿಸಿಸಿ ಬ್ಯಾಂಕ್ ನೌಕರರನ ಮೇಲೆ ಹಲ್ಲೆ
Published on

ಪ್ರಮುಖ ಮುಖ್ಯಾಂಶಗಳು

  • ಹಲ್ಲೆ ಪ್ರಕರಣ
  • ಶಾಸಕರ ವಿರುದ್ಧ ದೂರು ದಾಖಲು
  • ಬಿಡಿಸಿಸಿ ಬ್ಯಾಂಕ್ ನೌಕರರ ಮೇಲೆ ಹಲ್ಲೆ

ಬಿಡಿಸಿಸಿ ಬ್ಯಾಂಕ್ ನೌಕರನ ಮೇಲೆ ಹಲ್ಲೆ ಪ್ರಕರಣ

| ಶಾಸಕ ಲಕ್ಷ್ಮಣ ಸವದಿ ಸೇರಿ 8 ಜನರ ಮೇಲಿನ ಪ್ರಕರಣ

ಚಿಕ್ಕೋಡಿ :
ಬಿಡಿಸಿ ಬ್ಯಾಂಕ್ ಅಥಣಿ ತಾಲೂಕು ನೌಕರರ ಸಂಘದ ಅಧ್ಯಕ್ಷ ನಿಂಗರಾಜ ಕರೆಪ್ಪ ಕರೆಣ್ಣವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ, ಹಾಗೂ ಚಿದಾನಂದ ಸವದಿ ಸೇರಿ 8 ಜನರ ವಿರುದ್ಧ ಭಾನುವಾರ ಪ್ರಕರಣ ದಾಖಲಾಗಿದೆ.

ಡಿ.೩ರಂದು ಬಿಡಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಿಂಗಪ್ಪ ಕರೆನ್ನವರ ಮೇಲೆ ಹಲ್ಲೆ ನಡೆದಿತ್ತು. ಅನಾರೋಗ್ಯದ ನಿಂಗಪ್ಪ ಕರೆನ್ನವರ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಆಸ್ಪತ್ರೆಯಲ್ಲಿ ಪೊಲೀಸರಿಗೆ ದೂರು ಮಾಹಿತಿ.

ಶಾಸಕ ಲಕ್ಷ್ಮಣ ಸವದಿ ಮನೆಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಶಾಸಕ, ಅವರ ಪುತ್ರ ಹಾಗೂ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹಲ್ಲೆಗೊಳಗಾದ ನಿಂಗರಾಜ ಕರೆನ್ನವರ ಆರೋಪ ಮಾಡಿದ್ದಾರೆ.

ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net