

ಪ್ರಮುಖ ಮುಖ್ಯಾಂಶಗಳು
ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ
ಬಾಲಕ ಸಾವು, ಇಬ್ಬರಿಗೆ ಗಂಭೀರ ಗಾಯ
ಚಿಕ್ಕೋಡಿ : ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ತುಂಬಿದ ಲಾರಿಯೊಂದು ಶಾಲೆಗೆ ಹೋಗುತ್ತಿದ್ದ ಮೂವರು ಮಕ್ಕಳ ಮೇಲೆ ಪಲ್ಟಿಯಾಗಿ ಬಾಲಕ ಘಟನೆ ರಾಯಬಾಗ ತಾಲೂಕಿನ ಹಾಲಶಿರಗೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಸುಟ್ಟಟ್ಟಿ ಗ್ರಾಮದ ಅಮಿತ ಚಿದಾನಂದ ಕಾಂಬಳೆ(11) ಮೃತ ಬಾಲಕ. ಅಂಜಲಿ ಲಕ್ಷ್ಮಣ ಕಾಂಬಳೆ(೧೬), ಅವಿನಾಶ ಕಾಂಬಳೆ(೧೬) ಇದ್ದಾರೆ. ಮೂರು ರಸ್ತೆ ಬದಿಯಿಂದ ನಡೆದುಕೊಂಡು ಶಾಲೆಗೆ ತೆರಳುತ್ತಿದ್ದಾಗ ಮಿರಜ ಕಡೆಯಿಂದ ಯಮನಂತೆ ಆಗಮಿಸಿದ ಲಾರಿ ಚಾಲಕನ ನಿಯಂತ್ರಣ ತಪ್ಪಿದ ರಸ್ತೆ ತಿರುವಿನಲ್ಲಿ ಮಕ್ಕಳ ಮೇಲೆಯೇ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಲಾರಿ ಕೆಳಗೆ ಸಿಲುಕಿದ್ದ ಮಗುವನ್ನು ಹೊರ ತೆಗೆದಿದ್ದಾರೆ.
ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.