ಇಂಜಿನಿಯರ್‌ಗಳ ಲೈಸೆನ್ಸ್ ನವೀಕರಣಕ್ಕೆ ಆಗ್ರಹಿಸಿ ಕ್ರೆಡೈದಿಂದ ಯುವರಾಜ ಹುಲಜಿ ಮತ್ತು ಪ್ರಶಾಂತ ವಾಂಡ್ಕರ್ ಪಾಲಿಕೆ ಆಯುಕ್ತ ಕಾರ್ತಿಕ ಎಂ.ರಿಗೆ ಬುಧವಾರ ಮನವಿ ಸಲ್ಲಿಸಿದರು.
Published on:
Copied
Follow Us
ಬೆಳಗಾವಿ: ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಅನುಮತಿ ಅರ್ಜಿಗಳ ಪ್ರಕ್ರಿಯೆಗೆ ತೊಂದರೆಯಾಗದಂತೆ ನಿರ್ಮಾಣ-2 ಪೋರ್ಟಲ್‌ನಲ್ಲಿ ಅನುಮತಿ ಹೊಂದಿರುವ ಇಂಜಿನಿಯರ್‌ಗಳ ಲೈಸೆನ್ಸ್ ನವೀಕರಣ ಹಾಗೂ ಸಕ್ರಿಯಗೊಳಿಸುವಿಕೆಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಕ್ರೆಡೈ ಬೆಳಗಾವಿ ಆಗ್ರಹಿಸಿದೆ.
ಈ ಸಂಬಂಧ ಮಹಾನಗರ ಪಾಲಿಕೆ ಆಯುಕ್ತರಿಗೆ ಕ್ರೆಡೈ ಅಧ್ಯಕ್ಷ ಅಧ್ಯಕ್ಷ ಯುವರಾಜ ಹುಲಜಿ ಹಾಗೂ ಕಾರ್ಯದರ್ಶಿ ಪ್ರಶಾಂತ ವಾಂಡ್ಕರ್ ನೇತೃತ್ವದಲ್ಲಿ ಬುಧವಾರ ಮನವಿ ಸಲ್ಲಿಸಲಾಗಿದೆ.
ಪ್ರಸ್ತುತ ಹಲವು ಇಂಜಿನಿಯರ್‌ಗಳ ಲೈಸೆನ್ಸ್ ನವೀಕರಣವಾಗದಿರುವುದರಿಂದ ನಿರ್ಮಾಣ-2 ಪೋರ್ಟಲ್ ಮೂಲಕ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಅನುಮತಿ ಅರ್ಜಿಗಳನ್ನು ಸಲ್ಲಿಸಲು ಹಾಗೂ ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಿಲ್ಡರ್‌ಗಳು ಮಾತ್ರವಲ್ಲದೆ ಕಟ್ಟಡ ಅನುಮತಿಗಾಗಿ ಕಾಯುತ್ತಿರುವ ಸಾರ್ವಜನಿಕರೂ ತೊಂದರೆ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ವಿಶೇಷವಾಗಿ ಮಾರ್ಪಾಡು ಮತ್ತು ಹೆಚ್ಚುವರಿ ನಿರ್ಮಾಣ ಹಾಗೂ ಗ್ರೌಂಡ್ ಪ್ಲಸ್ 4 (ಎ+4) ಕಟ್ಟಡಗಳ ಅನುಮತಿ ಅರ್ಜಿಗಳ ಪ್ರಕ್ರಿಯೆಗೆ ಸಮಸ್ಯೆಯಾಗದಂತೆ ಇಂಜಿನಿಯರ್‌ಗಳ ಲೈಸೆನ್ಸ್‌ಗಳನ್ನು ಶೀಘ್ರ ನವೀಕರಿಸಿ, ನಿರ್ಮಾಣ-2 ಪೋರ್ಟಲ್‌ನಲ್ಲಿ ಸಕ್ರಿಯಗೊಳಿಸಬೇಕು. ಇದರಿಂದ ಅನಗತ್ಯ ವಿಳಂಬ ತಪ್ಪಲಿದೆ. ಸಾರ್ವಜನಿಕರಿಗೆ ನಿಗದಿತ ಸಮಯದೊಳಗೆ ಸೇವೆ ದೊರೆಯುತ್ತದೆ. ಇಂಜಿನಿಯರ್‌ಗಳು ತಮ್ಮ ವೃತ್ತಿಪರ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುಕೂಲವಾಗಲಿದೆ ಎಂದು ಮನವಿ ಮಾಡಿಕೊಂಡರು.