ನಿಸ್ವಾರ್ಥ ಸೇವೆಯಿಂದ ಸಹಕಾರ ಸಂಘ ಪ್ರಗತಿ

ಖೇಮಲಾಪುರದ ಜನತಾ ವಿವಿಧೋದ್ಧೇಶ ಪಿಕೆಪಿಎಸ್ ಸಂಘದ ಕಾರ್ಯಾಲಯದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ ಅವರನ್ನು ಸನ್ಮಾನಿಸಲಾಯಿತು. ಕಾಡಯ್ಯ ಹಿರೇಮಠ, ಮಹಾದೇವ ಖಡಕಬಾವಿ, ಪ್ರಕಾಶ ರಾಯಣ್ಣವರ, ಎಸ್.ಬಿ.ಖಡಕಬಾವಿ ಇತರರಿದ್ದರು.
ಖೇಮಲಾಪುರದ ಜನತಾ ವಿವಿಧೋದ್ಧೇಶ ಪಿಕೆಪಿಎಸ್ ಸಂಘದ ಕಾರ್ಯಾಲಯದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ ಅವರನ್ನು ಸನ್ಮಾನಿಸಲಾಯಿತು. ಕಾಡಯ್ಯ ಹಿರೇಮಠ, ಮಹಾದೇವ ಖಡಕಬಾವಿ, ಪ್ರಕಾಶ ರಾಯಣ್ಣವರ, ಎಸ್.ಬಿ.ಖಡಕಬಾವಿ ಇತರರಿದ್ದರು.
Published on
ಕುಡಚಿ: ನಿಸ್ವಾರ್ಥದಿಂದ ದುಡಿದಾಗ ಮಾತ್ರ ಸಹಕಾರ ಸಂಘಗಳು ಬೆಳೆಯಲು ಸಾಧ್ಯ. ರೈತರಿಗೆ ಬೇಕಾದ ಸಾಲ ಸೌಲಭ್ಯಗಳು ಬಿಡಿಸಿಸಿ ಬ್ಯಾಂಕ್‌ನಲ್ಲಿವೆ. ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ ಹೇಳಿದರು.
ಸಮೀಪದ ಖೇಮಲಾಪುರ ಗ್ರಾಮದ ಜನತಾ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಾರ್ಯಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೈನುಗಾರಿಕೆ ಮಾಡುವವರಿಗೆ ಸಾಲಸೌಲಭ್ಯ ನೀಡಲಾಗುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಬಿಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಽಕಾರಿ ಪ್ರಕಾಶ ರಾಯಣ್ಣವರ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ ಸತತ ೫ನೇ ಬಾರಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದು ಸಂತಸ ತಂದಿದೆ. ಅಧ್ಯಕ್ಷರಾಗಿದ್ದ ಸಮಯದಲ್ಲಿ ಸಹಕಾರ ಸಂಘದ ಮೂಲಕ ಅನೇಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಸಿಬ್ಬಂದಿಗೆ ಬಡ್ತಿ ನೀಡಿದ್ದಾರೆ. ಅವರ ಕುಟುಂಬಕ್ಕೆ ವಿಮೆ ಮಾಡಿಸಿದ್ದಾರೆ ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ನೀರಿಕ್ಷಕ ಎನ್.ಕೆ.ಕರೆಣ್ಣವರ ಮಾತನಾಡಿದರು. ಸಂಘದ ಅಧ್ಯಕ್ಷ ಮಹಾದೇವ ಖಡಕಬಾವಿ, ಕಾರ್ಯದರ್ಶಿ ಎಸ್.ಬಿ.ಖಡಕಬಾವಿ, ಬಿಡಿಸಿಸಿ ಬ್ಯಾಂಕ್ ನೀರಿಕ್ಷಕ ಎಂ.ಬಿ.ಮರಡಿ, ಕಾಡಯ್ಯ ಹಿರೇಮಠ, ಎಸ್.ಬಿ.ಪಾಟೀಲ, ಸುನೀಲ ನಂದಗಾAವ, ಭರತ ಬಾಬಣ್ಣವರ, ಚಿದಾನಂದ ಬನಶಂಕರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net