ಬೆಳಗಾವಿ ತಾಲೂಕಿನ ಹುಣಸೀಕಟ್ಟಿ ಗ್ರಾಮದ ರುದ್ರಮುನಿ ಶಿವಯೋಗಿ ಮಠದಲ್ಲಿ ಭಾನುವಾರ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರನ್ನು ರುದ್ರಮುನಿ ಶಿವಯೋಗಿ ಮಠದ ವತಿಯಿಂದ ಸತ್ಕರಿಸಲಾಯಿತು. ಮಠಾಧೀಶರು, ಭಕ್ತರಿದ್ದರು.
ಧಾರ್ಮಿಕ ಕಾರ್ಯಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದ ನೆಲೆಸಿದ್ದು, ದೇವರು ಮತ್ತು ಧರ್ಮಗುರುಗಳ ಆಶೀರ್ವಾದ ಅಗತ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ತಾಲೂಕಿನ ಹುಣಸೀಕಟ್ಟಿ ಗ್ರಾಮದ ರುದ್ರಮುನಿ ಶಿವಯೋಗಿ ಮಠದಲ್ಲಿ ಭಾನುವಾರ ಮೂರ್ತಿ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧಾರ್ಮಿಕ ಆಚರಣೆಗಳು ಹಾಗೂ ಮಠ&ಮಂದಿರಗಳು ಮಾನವೀಯ ಮೌಲ್ಯಗಳು, ಭಕ್ತಿ, ಸಂಸ್ಕಾರ ಮತ್ತು ಸಹೋದರತ್ವ ಬೆಳೆಸುವ ಕೇಂದ್ರಗಳಾಗಬೇಕು. ಧರ್ಮಗುರುಗಳು ಜನರಲ್ಲಿ ಶಾಂತಿ, ಸಹಬಾಳ್ವೆ ಹಾಗೂ ಉತ್ತಮ ಜೀವನ ಮೌಲ್ಯ ಬಿತ್ತುವ ಮೂಲಕ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯಬೇಕು ಎಂದರು.
ಕಾರ್ಯಕ್ರಮದಲ್ಲಿ ಮಠಾಧೀಶರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಇತರರಿದ್ದರು.