ನಿಪ್ಪಾಣಿ:ರಾಜ್ಯದಲ್ಲಿ ಯಾವುದೇ ಸರ್ಕಾರವಿದ್ದರೂ, ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಪ್ರತಿ ಮನೆಗೂ ಸರ್ಕಾರಿ ಯೋಜನೆ ತಲುಪಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡಿ, ಜನರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗದಂತೆ ಗಮನಹರಿಸಿದ್ದೇವೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.
ಸ್ಥಳೀಯ ನಗರಸಭೆಯಿಂದ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಅರ್ಹ ಲಾನುಭವಿಗಳಿಗೆ ವಿವಿಧ ಸಾಮಗ್ರಿ ವಿತರಿಸಿ ಮಾತನಾಡಿ, 11 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, 29 ಜನರಿಗೆ ಹೊಲಿಗೆ ಯಂತ್ರ ಮತ್ತು 8 ಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಿಸಲಾಗಿದೆ. ತ್ಯಾಜ್ಯ ನಿರ್ವಹಣೆಗಾಗಿ ನಾಲ್ಕು ಟಿಪ್ಪರ್ ಮತ್ತು ಎರಡು ಟ್ರ್ಯಾಕ್ಟರ್‌ಗೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ,
ಪ್ರಧಾನಮಂತ್ರಿ ನರೇಂದ್ರ ಮೋದಿ ಕಲ್ಪಿಸಿರುವ ಸೌರ ಯೋಜನೆಯಡಿ ಲಾನುಭವಿಗಳಿಗೆ ಸೌರ ಕಿಟ್ ನೀಡಲಾಗುವುದು ಎಂದರು.
ಬುಡಾ ಅಧ್ಯಕ್ಷ ಲಕ್ಮಣ ಚಿಂಗಳೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಸರ್ಕಾರ ಹಿಂದುಳಿದವರಿಗಾಗಿ ಐದು ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಜಾರಿಗೆ ತಂದಿದೆ ಎಂದರು.
ಮಾಜಿ ಉಪ ಮೇಯರ್ ಸಂತೋಷ ಸಾಂಗಾವಕರ್, ಸುನೀಲ ಪಾಟೀಲ, ಮಾಜಿ ಸದಸ್ಯ ರಾಜು ಗುಂದೇಶಾ, ನೀತಾ ಬಾಗಡೆ, ಆಶಾ ಟವಳೆ, ಅರುಣಾ ಮುದ್ಕುಡೆ, ಸುಜಾತಾ ಕದಂ, ಪ್ರಭಾವತಿ ಸೂರ್ಯವಂಶಿ, ಕಾವೇರಿ ಮಿರ್ಜೆ, ದೀಪಕ ಸಾವಂತ, ಸಂಜಯ ಚವ್ಹಾಣ ಇತರರಿದ್ದರು.