ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಐನಾಪುರ ಶ್ರೀ ಸಿದ್ಧೇಶ್ವರ ಜಾತ್ರಾ ಕಮಿಟಿಯಿಂದ ಜಾತ್ರೆ ಭಿತ್ತಿಪತ್ರ ನೀಡಲಾಯಿತು. ದಾದಾಸಾಹೇಬ ಜಂತೆನ್ನವರ, ಸಂತೋಷ ಪಾಟೀಲ, ಸಂಜು ಕುಚನೂರೆ ಇತರರು ಇದ್ದರು.
ಐನಾಪುರ: ಸರ್ಕಾರದ ಆದೇಶ, ನಿಯಮಾವಳಿ ಅನುಸಾರ ಜಾತ್ರೆ ನಡೆಸಬೇಕು. ಕಾನೂನುಬಾಹಿರವಾಗಿ ಪ್ರಾಣಿ ಹಿಂಸೆ ಆಗಬಾರದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಐನಾಪುರ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಭಿತ್ತಿಪತ್ರ ಸ್ವೀಕರಿಸಿ ಮಾತನಾಡಿ, ಸ್ಪರ್ಧೆಗಳಲ್ಲಿ ಕಾನೂನು ಉಲ್ಲಂಸಬಾರದು. ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು, ಮೂಢನಂಬಿಕೆ, ಮೌಢ್ಯಗಳಿಗೆ ಆಸ್ಪದ ನೀಡಬಾರದು. ಜಾತ್ರೆಯಲ್ಲಿ ಪರಿಶುದ್ಧ ಭಂಡಾರ ಉಪಯೋಗಿಸಬೇಕು ಎಂದರು.
ಹೆಚ್ಚುವರಿ ಪೊಲೀಸ್ ಅಧಿಕಾರಿ ರಾಮಗೌಡ ಬಸರಗಿ ಮಾತನಾಡಿ, ಜಾತ್ರಾ ಕಮಿಟಿ ಸದಸ್ಯರು ಹಾಗೂ ಪಟ್ಟಣದ ನಾಗರಿಕರು ಪೊಲೀಸರೊಂದಿಗೆ ಸಹಕರಿಸಬೇಕು. ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ನಿಮ್ಮೊಂದಿಗೆ ಸಹಕಾರ ನೀಡಲಿದೆ. ಶಿಸ್ತುಬದ್ಧವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಾತ್ರೆ ನಡೆಸಬೇಕೆಂದು ತಿಳಿಸಿದರು.
ಜಾತ್ರಾ ಕಮಿಟಿ ಅಧ್ಯಕ್ಷ ದಾದಾಸಾಹೇಬ ಜಂತನ್ನವರ, ಉಪಾಧ್ಯಕ್ಷ ಸಂತೋಷ ಪಾಟೀಲ, ವಕೀಲ ಸಂಜಯ ಕುಚನೂರ, ಬಾಳಾಸಾಬ ಮಡಿವಾಳ, ಕುಮಾರ ಅಪರಾಜ್, ಸುದರ್ಶನ ಜಂತನ್ನವರ, ಅಣ್ಣಾಸಾಬ ದೂಗನವರ, ತಾತ್ಯಾಸಾಬ ಕೊರಬು ಇತರರು ಇದ್ದರು.