ಅಧಿಕಾರಿ ಮೇಲೆ ಹಲ್ಲೆಗೆ ಖಂಡನೆ

ಕಂದಾಯ ಇಲಾಖೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ವಕೀಲನ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಸರ್ಕಾರಿ ನೌಕರರ ಸಂಘದ ಸದಸ್ಯರು ರಾಮದುರ್ಗ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಐ.ವೈ.ಪವಾಡಿಗೌಡ, ಶಿವು ಗೊರವನಕೊಳ್ಳ, ಮಹೇಶ ತೆಂಗಿನಕಾಯಿ, ಅಕ್ಕಮಹಾದೇವಿ ಹಲಕಿ ಇತರರಿದ್ದರು.

Published on

ರಾಮದುರ್ಗ: ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಮೇಲೆ ವಕೀಲರೊಬ್ಬರು ಹಲ್ಲೆ ಮಾಡಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಪ್ರಕಾಶ ಗಾಯಕವಾಡಗೆ ಮನವಿ ಸಲ್ಲಿಸಿದರು.

ನ್ಯಾಯಾಲಯದ ಆದೇಶದಂತೆ ಹೆಸರು ದಾಖಲಿಸುವ ವಿಷಯಕ್ಕೆ ಸಂಬಂಧಿಸಿ ವಕೀಲ ಶುಕ್ರವಾರ ಕಂದಾಯ ಕಚೇರಿಗೆ ತೆರಳಿ ಅಂಗವಿಕಲ ಸೋಮಶೇಖರ ಭೂಷಣ್ಣವರ ಮೇಲೆ ದೈಹಿಕ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳಿಗೆ ರಕ್ಷಣೆ ನೀಡಲು ಸರ್ಕಾರ ಸೂಕ್ತ ಕಾನೂನು ರಚಿಸಬೇಕು. ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ತೆಗದುಕೊಳ್ಳಬೇಕು
ಎಂದು ಮನವಿ ಮೂಲಕ ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಐ.ವೈ.ಪವಾಡಿಗೌಡ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಶಿವು ಗೊರವನಕೊಳ್ಳ, ಮಹೇಶ ತೆಂಗಿನಕಾಯಿ, ಅಕ್ಕಮಹಾದೇವಿ ಹಲಕಿ, ಲೋಕೇಶ ಚವ್ಹಾಣ, ಸಂಜು ಹಿರೇಮಠ, ಪ್ರವೀಣ ಖಾನಾಪುರ, ತಮ್ಮಣ್ಣ ಪಾಟೀಲ, ನಿಂಗನಗೌಡ ಚಿಗದಮ್ಮನವರ, ಸಮೀರ್ ಮಾಲದಾರ, ಮಣಿಪ್ರಸಾದ ಕಂಠಿಮಠ, ಗೋವಿಂದ ಚೌಹಾಣ, ಸಂಗಪ್ಪ ಹೊಸಮನಿ, ಶಿವಲೀಲಾ ಬಾಗೇವಾಡಿ, ರೇಖಾ ಹುಲ್ಲನ್ನವರ, ಅಶ್ವಿನಿ ಹವೇಲಿ, ರವಿಕುಮಾರ ಕುಂಬಾರ, ಮೀನಾಕ್ಷಿ ಲಮಾಣಿ, ಪದ್ಮಾ ತುಂಗಳ, ಶೈಲಾ ಅಕ್ಕಿಮರಡಿ, ಸಂತೋಷ ಬೀಳಗಿಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net