ಕ್ಯಾಂಟಮ್ ವಿದ್ಯಾರ್ಥಿಗಳ ಸಮ್ಮೇಳನ ಸಮಾರೋಪ

ಬೆಳಗಾವಿಯ ವಿಟಿಯುದಲ್ಲಿ ಶುಕ್ರವಾರ ಜರುಗಿದ ರಾಷ್ಟ್ರೀಯ ಕ್ಯಾಂಟಮ್ ವಿದ್ಯಾರ್ಥಿಗಳ ಸಮ್ಮೇಳನದ ಸಮಾರೋಪದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ.ಶಂಕರ್ ಸೆಲ್ವರಾಜ, ಡಾ.ಎಂ.ಕೆ.ರಬಿನಲ್, ಡಾ.ಹರೀಶ ಬೆಂಡಿಗೇರಿ ಇತರರಿದ್ದರು.
ಬೆಳಗಾವಿಯ ವಿಟಿಯುದಲ್ಲಿ ಶುಕ್ರವಾರ ಜರುಗಿದ ರಾಷ್ಟ್ರೀಯ ಕ್ಯಾಂಟಮ್ ವಿದ್ಯಾರ್ಥಿಗಳ ಸಮ್ಮೇಳನದ ಸಮಾರೋಪದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಡಾ.ಶಂಕರ್ ಸೆಲ್ವರಾಜ, ಡಾ.ಎಂ.ಕೆ.ರಬಿನಲ್, ಡಾ.ಹರೀಶ ಬೆಂಡಿಗೇರಿ ಇತರರಿದ್ದರು.
Published on
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಇನ್‌ಸ್ಟಿಟ್ಯೂಷನ್ಸ್ ಇನೋವೇಷನ್ ಕೌನ್ಸಿಲ್, ಕ್ವಾಂಟಮ್ ಕ್ಲಬ್ ಸಹಯಯೋಗದೊಂದಿಗೆ ವಿವಿ ಜ್ಞಾನಸಂಗಮದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಕ್ಯಾಂಟಮ್ ವಿದ್ಯಾರ್ಥಿಗಳ ಸಮ್ಮೇಳನ ಮತ್ತು ವಿಚಾರ ಸಂಕಿರಣದ ಸಮಾರೋಪದಲ್ಲಿ ಶುಕ್ರವಾರ ದೇಶದ ಅಭಿವೃದ್ಧಿಗೆ ತಂತ್ರಜ್ಞಾನ ಮಾರಕವಲ್ಲ, ಪೂರಕವಾಗಿದ್ದು, ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ತಂತ್ರಜ್ಞಾನದಿಂದಾಗುವ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂಬ ನಿರ್ಣಯವನ್ನು ತಂತ್ರಜ್ಞಾನ ಕ್ಷೇತ್ರದ ದಿಗ್ಗಜರು ಮಂಡಿಸಿದರು.
ಸಮಾರೋಪದಲ್ಲಿ ಭಾರತೀಯ ವಿಜ್ಞಾನ ಮಂದಿರದ ಸಹಾಯಕ ಪ್ರಾಧ್ಯಾಪಕ ಡಾ.ಶಂಕರ್ ಸೆಲ್ವರಾಜ, ಕರ್ನಾಟಕ ವಿವಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಕೆ.ರಬಿನಾಳ ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಹಾರ್ಡ್‌ವೇರ್ ತಂತ್ರಜ್ಞಾನದಲ್ಲಿ ಕ್ಯಾಂಟಮ್ ಬಳಕೆ, ಕ್ವಿಟ್‌ಗಳ ವಿನ್ಯಾಸದಲ್ಲಿ ಕ್ವಾಂಟಮ್ ಸುರಂಗ ಮಾರ್ಗಗಳ ಕುರಿತು ವಿಷಯ ಪ್ರಸ್ತಾಪಿಸಿದರು.
ಈ ಎರಡು ದಿನಗಳ ಸಮ್ಮೇಳನದಲ್ಲಿ ಸಂಶೋಧನಾ ವಿದ್ಯಾರ್ಥಿಗಳು 200ಕ್ಕೂ ಹೆಚ್ಚು ತಮ್ಮ ಸಂಶೋಧನಾ ಪತ್ರಿಕೆಗಳನ್ನು ಮಂಡಿಸಿದರು. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಟಿಯು ವಿಶೇಷಾಧಿಕಾರಿ ಡಾ.ಹರೀಶ್ ಬೆಂಡಿಗೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net