ಕನ್ನಡ ಶಾಲೆ ಉಳಿವಿಗೆ ಕಂಕಣಬದ್ಧರಾಗಿ

ಹಾರೂಗೇರಿಯಲ್ಲಿ ಹಮ್ಮಿಕೊಂಡಿದ್ದ  ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ನಿಜಗುಣಾನಂದ ಸ್ವಾಮೀಜಿ ಮಾತನಾಡಿದರು. ಸರ್ವಾಧ್ಯಕ್ಷ ಡಾ.ವಿ.ಎಸ್.ಮಾಳಿ ಇತರರಿದ್ದರು.
ಹಾರೂಗೇರಿಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ನಿಜಗುಣಾನಂದ ಸ್ವಾಮೀಜಿ ಮಾತನಾಡಿದರು. ಸರ್ವಾಧ್ಯಕ್ಷ ಡಾ.ವಿ.ಎಸ್.ಮಾಳಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ವಾಧ್ಯಕ್ಷ ಡಾ.ವಿ.ಎಸ್.ಮಾಳಿ ಕರೆ
  • ಹಾರೂಗೇರಿಯಲ್ಲಿ ಜಿಲ್ಲಾ ಮಟ್ಟದ ಸಾಹಿತ್ಯ ಹಬ್ಬ
ಹಾರೂಗೇರಿ: ಸರ್ಕಾರಿ ಶಾಲೆಗಳು ದೇಶ ಕಟ್ಟುವ ಜತೆಗೆ ಕನ್ನಡ ಉಳಿಸುವ ಕಾರ್ಯ ಮಾಡುತ್ತಿವೆ. ಆದರೆ, ಈಚೆಗೆ ಸರ್ಕಾರಿ ಶಾಲೆಗಳು ಒಂದೊಂದಾಗಿ ಕಣ್ಮರೆಯಾಗುತ್ತಿರುವುದು ಕಳವಳಕಾರಿ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಡಾ.ವಿ.ಎಸ್.ಮಾಳಿ ಹೇಳಿದರು.
ಪಟ್ಟಣದ ಜೈನ ಸಮುದಾಯ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ೧೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಶಾಲೆ ಉಳಿವಿಗೆ ಎಲ್ಲರೂ ಕಂಕಣಬದ್ಧರಾಗಬೇಕು. ಕೊಲ್ಲುವೆನೆಂಬ ಭಾಷೆ ದೇವರದ್ದಾದರೆ, ಬದುಕುವೆನೆಂಬ ಭಾಷೆ ಭಕ್ತನದಾಗಬೇಕು. ವಿದ್ಯಾರ್ಥಿಗಳು ಸಮಯದ ಸದ್ಬಳಕೆ ಮಾಡಿಕೊಂಡು ಜ್ಞಾನ ಸಂಪಾದಿಸಬೇಕು. ದೇಶದಲ್ಲಿ ದುಡಿಮೆಗೆ ಕೊರತೆಯಿಲ್ಲ. ಹಾಗಾಗಿ ನಾಡಿನಲ್ಲೆ ಸೇವೆ ಸಲ್ಲಿಸುವ ಮೂಲಕ ಋಣ ತೀರಿಸಬೇಕು. ಅವಿಭಕ್ತ ಕುಟುಂಬ ಉಳಿದು ಬೆಳೆಯಬೇಕು ಎಂದರು.
ಬಿಮ್ಸ್ ನಿರ್ದೇಶಕ ಸಿದ್ದು ಹುಲ್ಲೋಳಿ ಮಾತನಾಡಿ, ಕನ್ನಡ ಶಾಲೆ ಉಳಿವಿಗೆ ಎಲ್ಲರೂ ಒಕ್ಕೊರಲಿನಿಂದ ಶ್ರಮಿಸಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ವ್ಯವಹಾರ ಜ್ಞಾನ ನೀಡಬೇಕು ಎಂದರು.
ಸಾಧಕರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಪಿ.ರಾಜೀವ, ಬಿ.ಸಿ.ಸರಿಕರ, ಕಸಾಪ ತಾಲೂಕು ಘಟಕದ ಅಧ್ಯಕ್ಷ ಈರನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ವಸಂತ ಲಾಳಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ಜಿನ್ನಪ್ಪ ಅಸ್ಕಿ, ಬಿ.ಆರ್.ಆಜೂರ, ರಾಮಣ್ಣ ಗಸ್ತಿ, ಶ್ರೀಪತಿ ದಟವಾಡ, ನಿಂಗಪ್ಪ ಚೌಗಲಾ, ಸುರೇಶ ಐಹೊಳೆ, ವಸಂತ ಅಲಖನೂರ, ರವೀಂದ್ರ ಪಾಟೀಲ, ಟಿ.ಎಸ್.ವಂಟಗೂಡಿ, ಶಂಕರ ಕ್ಯಾಸ್ತಿ, ಬಿ.ಎಲ್.ಘಂಟಿ ಇತರರಿದ್ದರು.
"

ಎಲ್ಲರೂ ಉತ್ತಮ ಸಂಸ್ಕೃತಿ, ಸಂಸ್ಕಾರ ಅಳವಡಿಸಿಕೊಳ್ಳಬೇಕು. ಮಂದಿರ, ಮಸೀದಿ, ಚರ್ಚ್ ಕಟ್ಟುವುದು ಬಿಟ್ಟು ಸರ್ಕಾರಿ ಕನ್ನಡ ಶಾಲೆ ಉಳಿಸುವಲ್ಲಿ ಮುಂದಾಗಬೇಕು. ಕನ್ನಡ ಭಾಷೆ ಮತ್ತಷ್ಟು ಶ್ರೀಮಂತಗೊಳಿಸಲು ಶ್ರಮಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net