ಮುರಗೋಡದಲ್ಲಿ ಇ-ಕೆವೈಸಿ ಹೆಸರಿನಲ್ಲಿ ಅನಧಿಕೃತ ಹಣ ವಸೂಲಿ ಮಾಡುತ್ತಿರುವ ಗ್ರಾಮ ಒನ್ ಕೇಂದ್ರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕರು ಉಪ ತಹಸೀಲ್ದಾರ್ ಡಿ.ಬಿ.ಅಲ್ಲಯ್ಯನವರಮಠಗೆ ಮನವಿ ಸಲ್ಲಿಸಿದರು. ಜಗದೀಶ ಯರಗಟ್ಟಿಮಠ, ಚಂದ್ರಗೌಡ ಪಾಟೀಲ ಇತರರಿದ್ದರು.
Published on:
Copied
Follow Us
ಮುರಗೋಡ: ಗ್ರಾಮ ಒನ್ ಕೇಂದ್ರಗಳಲ್ಲಿ ಸರ್ಕಾರಿ ಯೋಜನೆಗಳ ಇ-ಕೆವೈಸಿ ಒಂದು ಅರ್ಜಿಗೆ 200 ರಿಂದ 250 ರೂ. ವರೆಗೆ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಮಂಗಳವಾರ ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಸಾಮಾಜಿಕ ಕಾರ್ಯಕರ್ತ ಜಗದೀಶ ಯರಗಟ್ಟಿಮಠ ಮಾತನಾಡಿ, ಮುರಗೋಡ ಗ್ರಾಪಂ ವ್ಯಾಪ್ತಿಯ ರಾಮಾಪುರ ತಾಂಡೆ ಗ್ರಾಮಗಳಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಗ್ರಾಮ ಒನ್ ಕೇಂದ್ರದಲ್ಲಿ ಇ-ಕೆವೈಸಿ ಮಾಡಲು ಜನರು ಮುಗಿಬಿಳುತ್ತಿದ್ದಾರೆ. ಇದರ ಲಾಭ ಪಡೆಯಲು ಗ್ರಾಮ ಒನ್ ಸಿಬ್ಬಂದಿ ಅನಧಿಕೃತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್ ಡಿ.ಬಿ.ಅಲ್ಲಯ್ಯನವರಮಠ ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ಮಾಡಿ ಕ್ರಮ ಜರುಗಿಸುವುದಾಗಿ ಹೇಳಿದರು.
ಆರ್.ಐ.ಹಿರೇಮಠ, ಮಹೇಶ ಕುರಬೇಟ, ರಾಜು ಕುರಬೇಟ, ಪಿ.ಎಸ್.ಕಾರಗಿ, ಎಂ.ಎಸ್.ಕಿತ್ತೂರ, ಪಿ.ಬಿ.ವನ್ನೂರ, ವಿಠ್ಠಲ ಬುಧಗಟ್ಟಿ, ಅಶೋಕ ರಗಟಿ, ಲಕ್ಷ್ಮಣ ಡಂಗುರಿ, ರವಿ ಬುಧಗಟ್ಟಿ ಇತರರಿದ್ದರು.