ಜೀವನದಲ್ಲಿ ಸಂಗಾತಿ ಆಯ್ಕೆ ಬಹುಮುಖ್ಯ

ಬೆಳಗಾವಿಯಲ್ಲಿ ಭಾನುವಾರ ವೀರಶೈವ ಲಿಂಗಾಯತ ವಧು-ವರ ಪಾಲಕರ ಸಮ್ಮೇಳನ ಉದ್ಘಾಟನೆಯಲ್ಲಿ ಸಮಾರಂಭದಲ್ಲಿ ಡಾ.ಎಫ್.ವಿ.ಮಾನ್ವಿ, ಎಂ.ಬಿ.ಝಿರಲಿ, ರತ್ನಪ್ರಭಾ ಬೆಲ್ಲದ, ಡಾ.ಗುರದೇವಿ ಹುಲೆಪ್ಪನವರಮಠ ಇತರರು ಇದ್ದರು.
ಬೆಳಗಾವಿಯಲ್ಲಿ ಭಾನುವಾರ ವೀರಶೈವ ಲಿಂಗಾಯತ ವಧು-ವರ ಪಾಲಕರ ಸಮ್ಮೇಳನ ಉದ್ಘಾಟನೆಯಲ್ಲಿ ಸಮಾರಂಭದಲ್ಲಿ ಡಾ.ಎಫ್.ವಿ.ಮಾನ್ವಿ, ಎಂ.ಬಿ.ಝಿರಲಿ, ರತ್ನಪ್ರಭಾ ಬೆಲ್ಲದ, ಡಾ.ಗುರದೇವಿ ಹುಲೆಪ್ಪನವರಮಠ ಇತರರು ಇದ್ದರು.
Published on
ಬೆಳಗಾವಿ: ಧರ್ಮ, ಅರ್ಥ, ಕಾಮ, ಮೋಕ್ಷ ಚತುರ್ವಿಧ ಪುರುಷಾರ್ಥಗಳಲ್ಲಿ ಬಹುಮುಖ್ಯವೆನಿಸಿದೆ. ಇವುಗಳನ್ನು ಈಡೇರಿಸಿಕೊಳ್ಳುವುದು ಜೀವನದ ಕರ್ತವ್ಯವೆನಿಸಿದೆ. ಹಾಗಾಗಿ ದಾಂಪತ್ಯ ಜೀವನದಲ್ಲಿ ಸೂಕ್ತ ಸಂಗಾತಿ ಆಯ್ಕೆ ಬಹುಮುಖ್ಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವಧು-ವರ ಅನ್ವೇಷಣಾ ಕೇಂದ್ರದ ಅಧ್ಯಕ್ಷ ಡಾ.ಎಫ್.ವಿ.ಮಾನ್ವಿ ಹೇಳಿದರು.
ನಗರದ ಜೆಎನ್‌ಎಂಸಿ ಜಿರಗೆ ಸಭಾಂಗಣದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ವಧು-ವರ ಅನ್ವೇಷಣಾ ಕೇಂದ್ರ ಹಾಗೂ ಕೆಎಲ್ಇ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ವಧು-ವರ ಪಾಲಕರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗಕ್ಕಾಗಿ ಬೇರೆ ಊರುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮುದಾಯದ ಮಕ್ಕಳಿಗೆ ಕಂಕಣ ಭಾಗ್ಯ ದೊರೆಯುವುದು ಕಷ್ಟವಾಗುತ್ತಿದೆ.
ಇಂತಹ ಸಂದರ್ಭದಲ್ಲಿ ಮಹಾಸಭೆ ಜಿಲ್ಲಾ ಘಟಕ ಒಂದೇ ಸೂರಿನಡಿ ಸಮಾವೇಶ ಆಯೋಜಿಸಿ ಅನುಕೂಲ ಕಲ್ಪಿಸಿದೆ ಎಂದರು.
ಹಿರಿಯ ವಕೀಲ ಎಂ.ಬಿ.ಝಿರಲಿ ಮಾತನಾಡಿ, ಕುಟುಂಬ ವ್ಯವಸ್ಥೆ ಅತಂತ್ರವಾಗುತ್ತಿರುವ ಈ ಸಂದರ್ಭದಲ್ಲಿ ಅದನ್ನು ಗಟ್ಟಿಗೊಳಿಸುವ ಕೆಲಸವನ್ನು ಮಹಾಸಭೆ ಹಾಗೂ ಕೆಎಲ್ಇ ಮಾಡುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭೆ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ವಧು-ವರ ಅನ್ವೇಷಣಾ ಕೇಂದ್ರವು ಯಾವುದೇ ಲಾಭವಿಲ್ಲದೆ ಸಮುದಾಯದ ಹಿತಕ್ಕಾಗಿ ಶ್ರಮಿಸುತ್ತಿದೆ ಎಂದು ಶ್ಲಾಘಿಸಿದರು.
ಡಾ.ಗುರುದೇವಿ ಹುಲೆಪ್ಪನವರಮಠ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಬಾಳೇಕುಂದ್ರಿ, ಬಾಲಚಂದ್ರ ಭಾಗಿ, ಸೋಮಶೇಖರ ಚೊನ್ನದ, ಸರೋಜಿನಿ ನಿಶಾನ್ದಾರ, ಜ್ಯೋತಿ ಬಾದಾಮಿ, ಆರ್.ಪಿ.ಪಾಟೀಲ, ಎಂ.ವೈ.ಮೆಣಸಿನಕಾಯಿ ಇತರರಿದ್ದರು.
ಆಶಾ ಯಮಕನಮರಡಿ ಪ್ರಾರ್ಥಿಸಿದರು. ಆರ್.ಕೆ.ನಿರ್ಲಿ ನಿರೂಪಿಸಿದರು. ಮಹೇಶ ಗುರುನಗೌಡರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net