ಮಕ್ಕಳ ಆರೋಗ್ಯದತ್ತ ಕಾಳಜಿ ಅಗತ್ಯ

ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಮಂಗಳವಾರ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ ಕಾರ್ಯಕ್ರಮ ಜರುಗಿತು. ಡಾ.ಎಚ್.ಬಿ.ರಾಜಶೇಖರ, ಡಾ.ಸಂಜಯ ಕಂಬಾರ, ಡಾ.ಎಂ.ಎಸ್.ಕಡ್ಡಿ, ಡಾ.ಸೌಮ್ಯಾ ವೆರ್ನೇಕರ ಇತರರಿದ್ದರು.
ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಮಂಗಳವಾರ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ ಕಾರ್ಯಕ್ರಮ ಜರುಗಿತು. ಡಾ.ಎಚ್.ಬಿ.ರಾಜಶೇಖರ, ಡಾ.ಸಂಜಯ ಕಂಬಾರ, ಡಾ.ಎಂ.ಎಸ್.ಕಡ್ಡಿ, ಡಾ.ಸೌಮ್ಯಾ ವೆರ್ನೇಕರ ಇತರರಿದ್ದರು.
Published on
ಬೆಳಗಾವಿ : ಮಕ್ಕಳು ದೇಶದ ಸಂಪತ್ತು. ಮಕ್ಕಳ ಲಾಲನೆ-ಪಾಲನೆ ಜತೆಗೆ ಅವರ ಆರೋಗ್ಯದ ಬಗ್ಗೆ ಪಾಲಕರು ಗಮನಿಸುವುದು ಅಗತ್ಯ ಎಂದು ಯುಎಸ್‌ಎಂ ಕೆಎಲ್‌ಇಯ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಅಭಿಪ್ರಾಯಪಟ್ಟರು.
ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಂತುಹುಳ ನಿವಾರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಯಲುಶೌಚ, ಬರಿಗಾಲಿನಿಂದ ನಡೆಯುವುದು, ಶೌಚಕ್ಕೆ ಹೋಗಿಬಂದ ನಂತರ ಕೈತೊಳೆಯದೆಯಿರುವದು ಇನ್ನಿತರ ಕಾರಣಗಳಿಂದ ನೆಲದಲ್ಲಿರುವ ಕಣ್ಣಿಗೆ ಕಾಣದಿರುವ ಕ್ರಿಮಿಗಳು ಶರೀರವನ್ನು ಸೇರುತ್ತವೆ. ಇದರಿಂದ ಅನಾರೋಗ್ಯ ಕಾಡುತ್ತದೆ. ಈ ನಿಟ್ಟಿನಲ್ಲಿ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ನಿಗಾಯಿರಲಿ ಎಂದರು.
ವೈದ್ಯಕೀಯ ಅಧೀಕ್ಷಕ ಡಾ.ಸಂಜಯ ಕಂಬಾರ ಮಾತನಾಡಿ, ಮಕ್ಕಳಲ್ಲಿ ಜಂತುಹುಳು ಬಾಧೆಯಿಂದ ಉಂಟಾಗುವ ಅನಾರೋಗ್ಯ, ಅಪೌಷ್ಟಿಕತೆ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.
ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಎಂ.ಎಸ್.ಕಡ್ಡಿ, ಡಾ.ಸೌಮ್ಯಾ ವೆರ್ನೇಕರ, ಆಸ್ಪತ್ರೆ ಸಿಇಒ ನವೀನ್ ಎನ್., ಡಾ.ಯೋಗೇಶ್ ರಾವಳ, ಸಂತೋಷ ಇತಾಪೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net