ಮಕ್ಕಳೇ ಪ್ರತಿಭೆ ಪ್ರದರ್ಶಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ

ಹಾರೂಗೇರಿ ಪಟ್ಟಣದ ವೃಷಭೇಂದ್ರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರಂಭವನ್ನು ಪಿ.ಐ.ಭಂಡಾರಿ ಉದ್ಘಾಟಿಸಿದರು. ಮಧುಸೂದನ ಬೀಳಗಿ, ಡಾ.ವಿ.ಎಸ್.ಮಾಳಿ ಇತರರಿದ್ದರು.
ಹಾರೂಗೇರಿ ಪಟ್ಟಣದ ವೃಷಭೇಂದ್ರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರಂಭವನ್ನು ಪಿ.ಐ.ಭಂಡಾರಿ ಉದ್ಘಾಟಿಸಿದರು. ಮಧುಸೂದನ ಬೀಳಗಿ, ಡಾ.ವಿ.ಎಸ್.ಮಾಳಿ ಇತರರಿದ್ದರು.
Published on
ಹಾರೂಗೇರಿ: ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಪ್ರತಿಭೆ ಪ್ರದರ್ಶಿಸಬೇಕು. ನಿರ್ಣಾಯಕರು ಉತ್ತಮ ನಿರ್ಣಯ ನೀಡಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸಬೇಕು ಎಂದು ಚಿಕ್ಕೋಡಿಯ ಉಪನಿರ್ದೇಶಕ ಪಿ.ಐ.ಭಂಡಾರಿ ಹೇಳಿದರು.
ಪಟ್ಟಣದ ವೃಷಭೇಂದ್ರ ಶಿಕ್ಷಣ ಸಂಸ್ಥೆಯಲ್ಲಿ ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಹಾಗೂ ಎಸ್‌ವಿಇಎಸ್ ಸ್ವತಂತ್ರ ಪಪೂ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪಪೂ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಚಾರ್ಯ ಮಧುಸೂದನ ಬೀಳಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಕೆಲೆ, ಪ್ರತಿಭೆ ಹೊರತರುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸ್ವಾಗತಾರ್ಹ ಎಂದರು.
ಸಂಸ್ಥೆಯ ಕಾರ್ಯದರ್ಶಿ ಡಾ.ವಿ.ಎಸ್.ಮಾಳಿ ಮಾತನಾಡಿದರು. ಪ್ರಾಚಾರ್ಯ ಪಿ.ಎಂ.ಬೆಂಡೆ, ಡಾ.ಕೆ.ಎಸ್.ಕಾಂಬಳೆ, ಆರ್.ಎಸ್.ತಳವಾರ, ಎಂ.ಎಲ್.ನಾಯಿಕ ಇತರರಿದ್ದರು. ಪ್ರಾಚಾರ್ಯ ಎಸ್.ಎಸ್.ಅಣ್ಣಿಗೇರಿ ಸ್ವಾಗತಿಸಿದರು. ಎಸ್.ಎಲ್.ಮೊಕಾಶಿ ನಿರೂಪಿಸಿದರು. ಎಸ್.ಡಿ.ಮಸ್ಕೆ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net