ಸಿಐಟಿಯು ಅಧ್ಯಕ್ಷೆ ವರಲಕ್ಷ್ಮೀ ಸಭೆಯಲ್ಲಿ ಮಾತನಾಡಿ, ಇಲಾಖೆ ಯೋಜನೆಗಳ ಅನುಷ್ಠಾನದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಸೇವೆಯನ್ನು ನೇರ ವೇತನ ಪಾವತಿ ಅಡಿಯಲ್ಲಿ ಕಾಯಂಗೊಳಿಸಿ, ಭದ್ರತೆ ನೀಡಬೇಕು. ಶಿಶುಮಂದಿರ, ಬಾಲಮಂದಿರ ಇತ್ಯಾದಿ ಒಳಗೊಂಡಂತೆ ಐಸಿಪಿಎಸ್ ಅಡಿಯಲ್ಲಿ 11 ವರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಹೊಸ ಸಿಎಂಡಿಆರ್ ನಿಯಮಗಳಲ್ಲಿ ಶೇ.50ರಷ್ಟು ಮೀಸಲಾತಿ ನೀಡಬೇಕು. ಪೋಷಣ ಅಭಿಯಾನದಲ್ಲಿ ಕೆಲಸ ಮಾಡುವವರಿಗೆ 2021ರಿಂದ ಶೇ.3ರ ವೇತನ ಹೆಚ್ಚಳ ಬಾಕಿಯಿದ್ದು, ತಕ್ಷಣ ಮಂಜೂರಿಯಾಗಬೇಕು ಎಂದು ಆಗ್ರಹಿಸಿದರು.