ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆ ಮಂಗಳವಾರ

ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆಗಾಗಿ ಮಾಡಿಕೊಂಡಿರುವ ತಯಾರಿ
ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆಗಾಗಿ ಮಾಡಿಕೊಂಡಿರುವ ತಯಾರಿ
Published on
ಬೆಳಗಾವಿ: ನಗರದಲ್ಲಿ ಏ.21ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಪ್ರಯುಕ್ತ ನಗರದಲ್ಲಿ ರೂಪಕ ವಾಹನಗಳ ಮೆರವಣಿಗೆ ಆಯೋಜಿಸಿರುವುದರಿಂದ ಪ್ರಮುಖ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿದೆ.
ನರಗುಂದಕರಭಾವೆ ವೃತ್ತದಿಂದ ಆರಂಭಗೊಳ್ಳುವ ಮೆರವಣಿಗೆ ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಕಾಲೇಜ್ ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ ಗಲ್ಲಿ ರಸ್ತೆ, ಸಾಮ್ರಾಟ ಅಶೋಕ ವೃತ್ತ, ಟಿಳಕ ವೃತ್ತ, ಹೇಮುಕಲಾನಿ ವೃತ್ತ, ಶನಿ ಮಂದಿರ, ಕಪಿಲೇಶ್ವರ ಫ್ಲೈಓವರ ಮೂಲಕ ಸಂಚರಿಸಿ ಕಪಿಲೇಶ್ವರ ಮಂದಿರದ ಬಳಿ ಸಮಾರೋಪಗೊಳ್ಳುವುದು.
ಮೆರವಣಿಗೆ ಹಿನ್ನೆಲೆ ಮಧ್ಯಾಹ್ನ 2ರಿಂದ ಪ್ರಮುಖ ಮಾರ್ಗಗಳ ಬದಲಾವಣೆ ಮಾಡಲಾಗಿದ್ದು, ಕೋಟೆ ಕೆರೆ-ಚನ್ನಮ್ಮ ವೃತ್ತ ಮೂಲಕ ಸಂಚರಿಸುವ ವಾಹನಗಳು ಸಂಗೊಳ್ಳಿ ರಾಯಣ್ಣ ವೃತ್ತ, ಕೃಷ್ಣದೇವರಾಯ ವೃತ್ತ, ಸದಾಶಿವ ನಗರ, ಶೌರ್ಯ ವೃತ್ತ, ಗ್ಲೋಬ್ ಚಿತ್ರಮಂದಿರ ಮೂಲಕ ಖಾನಾಪುರ ರಸ್ತೆ, ಕಾಂಗ್ರೆಸ್ ರಸ್ತೆ ಹಾಗೂ ಗೋಗಟೆ ವೃತ್ತದ ಮೂಲಕ ಬರುವವರು ಗ್ಲೋಬ್ ಬಳಿ ಎಡ ತಿರುವು ಪಡೆದು ಹನುಮಾನ ನಗರ ಪ್ರಮುಖ ರಸ್ತೆ ಮೂಲಕ ಬಾಕ್ಸೈಟ್ ರಸ್ತೆ ಸೇರುವುದು. ನಾಥ ಪೈ ವೃತ್ತದಿಂದ ಕಪಿಲೇಶ್ವರ ಕಡೆ ಬರುವವರು ಖಾಸಬಾಗ ಬಸವೇಶ್ವರ ಸರ್ಕಲ್ ಮೂಲಕ, ಹಳೇ ಪಿಬಿ ರಸ್ತೆ, ವಿಆರ್‌ಎಲ್ ಲಾಜಿಸ್ಟಿಕ್, ಭಾತಕಾಂಡೆ ಸ್ಕೂಲ್ ಮಾರ್ಗವಾಗಿ ಸಂಚರಿಸುವವರು ಖಾಸಬಾಗ ಮೂಲಕ ಸಂಚರಿಸಬೇಕು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net