ಕಾಯಕದೊಂದಿಗೆ ಗುರು ನಾಮಸ್ಮರಣೆ ಮುಖ್ಯ

ಇಂಚಗೇರಿಮಠದಲ್ಲಿ ಚೈತ್ರ ಮಾಸದ ಜ್ಞಾನಯಜ್ಞ ಸಪ್ತಾಹದಲ್ಲಿ ರೇವಣಸಿದ್ಧೇಶ್ವರ ಮಹಾರಾಜರು ಮಾತನಾಡಿದರು. ಶಂಕರೆಪ್ಪ ಮಹಾರಾಜರು, ತುಕಾರಾಮ ಮಹಾರಾಜರು ಇತರರಿದ್ದರು.
ಇಂಚಗೇರಿಮಠದಲ್ಲಿ ಚೈತ್ರ ಮಾಸದ ಜ್ಞಾನಯಜ್ಞ ಸಪ್ತಾಹದಲ್ಲಿ ರೇವಣಸಿದ್ಧೇಶ್ವರ ಮಹಾರಾಜರು ಮಾತನಾಡಿದರು. ಶಂಕರೆಪ್ಪ ಮಹಾರಾಜರು, ತುಕಾರಾಮ ಮಹಾರಾಜರು ಇತರರಿದ್ದರು.
Published on
ಅರಟಾಳ: ಇಂಚಗೇರಿ ಸಂಪ್ರದಾಯದಲ್ಲಿ ಅಗಾಧ ಶಕ್ತಿ ಅಡಗಿದೆ. ಗುರುಲಿಂಗ ಜಂಗಮ ಮಹಾರಾಜರಿಂದ ಹಿಡಿದು ಸದ್ಗುರು ಜಗನ್ನಾಥ ಮಹಾರಾಜರವರೆಗೂ ಮಾಡಿದ ಧ್ಯಾನದ ಶಕ್ತಿ ಇಂಚಗೇರಿ ಸಂಪ್ರದಾಯದಲ್ಲಿದೆ. ಗುರು ಉಪದೇಶ ಪಡೆದು, ನಿತ್ಯ ನೇಮ ಮಾಡುವವರು ಗುರುವಿನ ಆರ್ಶೀವಾದ ಪಡೆದುಕೊಳ್ಳುತ್ತಾರೆ ಎಂದು ಇಂಚಗೇರಿಮಠದ ಸದ್ಗುರು ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.
ಸಮೀಪದ ಇಂಚಗೇರಿ ಮಠದಲ್ಲಿ ಶ್ರೀ ಗುರುಲಿಂಗಜಂಗಮ ಮಹಾರಾಜರ ಮತ್ತು ಶಿವಪ್ರಭು ಮಹಾರಾಜರ ಪುಣ್ಯ ಸ್ಮರಣೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಚೈತ್ರ ಮಾಸದ ಜ್ಞಾನಯಜ್ಞ ಸಪ್ತಾಹದಲ್ಲಿ ಮಾತನಾಡಿ, ದಾನ, ಧರ್ಮ ಕಷ್ಟದ ಕಾಲದಲ್ಲಿ ಕೈಹಿಡಿಯುತ್ತದೆ. ಕಾಯಕದ ಜತೆ ಗುರು ನಾಮಸ್ಮರಣೆ ಮುಖ್ಯ. ಗುರುಲಿಂಗ ಜಂಗಮ ಮಹಾರಾಜರ ಧ್ಯಾನದ ಶಕ್ತಿ, ಶಿವಪ್ರಭು ಮಹಾರಾಜರ ಶಾಂತಿ ಸಂದೇಶ, ಮಾಧವಾನಂದರ ದೇಶಭಕ್ತಿ, ಗುರುಪುತ್ರೇಶ್ವರ ಮಹಾರಾಜರ ಜ್ಞಾನದ ಶಕ್ತಿ ನಮ್ಮನ್ನು ಕಾಯುತ್ತಿದೆ ಎಂದರು.
ಶಂಕರೆಪ್ಪ ಮಹಾರಾಜರು ಮಾತನಾಡಿದರು. ತುಕಾರಾಮ ಮಹಾರಾಜರು, ನಾಮದೇವ ಮಹಾರಾಜರು, ಭೀಮಣ್ಣ ಮಹಾರಾಜರು, ಕೆಂಚಪ್ಪ ಮಹಾರಾಜರು, ಅಪ್ಪಾಸಾಬ ಮಹಾರಾಜರು, ಶೆಟ್ಟೆಪ್ಪ ಮಹಾರಾಜರು, ಮುಕುಂದ ಮಹಾರಾಜರು, ಸದಾಶಿವ ಮಹಾರಾಜರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net