ಮಾ.2ರ ರಾತ್ರಿ ನಗರದ 329 ಸ್ಥಳಗಳಲ್ಲಿ ಕಾಮದಹನ, ಮಾ.3ರಂದು 180 ಸ್ಥಳಗಳಲ್ಲಿ ಬಣ್ಣದಾಟದ ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ ಒಂದು ಸಾವಿರಕ್ಕಿಂತ ಹೆಚ್ಚು ಪೊಲೀಸ್ ಸಿಬ್ಬಂದಿ, 250 ಗೃಹ ರಕ್ಷಕ ಸಿಬ್ಬಂದಿ, ಕೆಎಸ್‌ಆರ್‌ಪಿ 7 ತುಕಡಿ, ಸಿಎಆರ್ 10 ತಂಡ ನಿಯೋಜಿಸಿದ್ದೇವೆ. ಅಗ್ನಿ ಶಾಮಕ ದಳ ಮತ್ತು ಎಸ್‌ಡಿಆರ್‌ಎಫ್ ಸಹಯೋಗ ಪಡೆದಿದ್ದೇವೆ. 19 ಚೆಕ್ ಪೋಸ್ಟ್ ಮಾಡಿ ಮದ್ಯ ಪಾನ ಮಾಡಿ ಓಡಾಡುವವರ ಮತ್ತು ಮಾರಕಾಸ್ತ್ರ ಇಟ್ಟುಕೊಂಡು ಓಡಾಡುವವರ ವಿರುದ್ಧ ತಪಾಸಿಸಿ ಕ್ರಮ ಕೈಗೊಳ್ಳಲಾಗುವುದು. 500ಕ್ಕೂ ಹೆಚ್ಚು ಸಿಸಿ ಕ್ಯಾಮರಾ, 8ಕ್ಕೂ ಹೆಚ್ಚು ಡ್ರೋಣ ಕ್ಯಾಮರಾ ನಿಗಾ ಇಡಲಾಗುವುದು ಎಂದು ಪೊಲೀಸ್ ಆಯುಕ್ತ ಭೂಷಣ ಬೋರಸೆ ತಿಳಿಸಿದ್ದಾರೆ.