ಜಯಂತಿ, ಉತ್ಸವಗಳಿಂದ ಸಮಾಜದ ಒಗ್ಗಟ್ಟು ಹೆಚ್ಚಳ

ಚಿಕ್ಕೋಡಿಯ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕವಟಗಿಮಠ ಅವರನ್ನು ಸನ್ಮಾನಿಸಲಾಯಿತು. ಸಂಜು ಅಡಕೆ, ರಾಮಾ ಮಾನೆ ಇತರರಿದ್ದರು.
ಚಿಕ್ಕೋಡಿಯ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕವಟಗಿಮಠ ಅವರನ್ನು ಸನ್ಮಾನಿಸಲಾಯಿತು. ಸಂಜು ಅಡಕೆ, ರಾಮಾ ಮಾನೆ ಇತರರಿದ್ದರು.
Published on
ಚಿಕ್ಕೋಡಿ: ಪಾಶ್ಚಿಮಾತ್ಯರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧ ಶೀಘ್ರ ಅಂತ್ಯಗೊಂಡು ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎನ್ನುವ ಆಶಯದೊಂದಿಗೆ ಸೋಮವಾರ ಚಿಕ್ಕೋಡಿ ಜೈನ ಸಮುದಾಯದಿಂದ ಭಗವಾನ ಮಹಾವೀರ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
ನಗರದ ಬಸ್ ನಿಲ್ದಾಣದ ಬಳಿ ಮಹಾವೀರ ಕೀರ್ತಿ ಸ್ತಂಭ ಬಳಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಜಗದೀಶ ಕವಟಗಿಮಠ, ಸರ್ವ ಧರ್ಮೀಯರು ಸೇರಿ ಮಹಾವೀರ ಜಯಂತಿ ಆಚರಿಸುತ್ತಿರುವುದು ಧಾರ್ಮಿಕ ಸೌಹಾರ್ದಕ್ಕೆ ಸಾಕ್ಷಿ. ಪ್ರತಿಯೊಬ್ಬರೂ ಇಂತಹ ಜಯಂತಿ, ಉತ್ಸವಗಳಲ್ಲಿ ಭಾಗವಹಿಸುವುದರಿಂದ ಸಮಾಜದ ಒಗ್ಗಟ್ಟು ಹೆಚ್ಚುತ್ತದೆ ಎಂದರು.
ಮಹಾವೀರ ಕೀರ್ತಿ ಸ್ತಂಭ ನಿರ್ಮಾಣಕ್ಕೆ ಶ್ರಮಿಸಿದ ದಿ.ಶಾಂತಪ್ಪ ಮಿರ್ಜಿ ಅವರನ್ನು ಸ್ಮರಿಸಲಾಯಿತು. ಸನ್ಮತ್ರ ಅಲ್ಪಸಂಖ್ಯಾತರ ಅಭಿವೃದ್ಧಿ ಸಂಘದ ಸತ್ಕಾರ್ಯಗಳಿಗೆ ಪೂರಕವಾಗಿ ಚಿಕ್ಕೋಡಿ ಸಾಯಿ ಪರಿವಾರದಿಂದ ಜಗದೀಶ ಕವಟಗಿಮಠ ೫೧ ಸಾವಿರ ರೂ. ದೇಣಿಗೆ ನೀಡಿದರು.
ಆರ್‌ಎಸ್‌ಎಸ್ ಮುಖಂಡ ಸಂಜು ಅಡಕೆ, ಪುರಸಭೆ ಮಾಜಿ ಅಧ್ಯಕ್ಷ ರಾಮಾ ಮಾನೆ, ರಂಜೀತ ಸಂಗ್ರೋಳೆ, ಬಿ.ಆರ್.ಯಾದವ, ಸಂಜಯ ಚೌಗಲಾ, ವರ್ಧಮಾನ ಸದಲಗೆ, ಅನಿಲ ಮಾನೆ, ದರ್ಶನ ಉಪಾಧ್ಯೆ, ಪಿಂಟು ಮೇಳವಂಕಿ, ಡಾ.ಪದ್ಮರಾಜ ಪಾಟೀಲ, ಮಹಾವೀರ ದಂಡಗೆ, ಬಿ.ಡಿ.ನಸಲಾಪುರೆ, ಶಿರಿಷ್ ಮೆಹತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net