ಅಗ್ನಿ ಅವಘಡ ತಡೆಗೆ ಎಚ್ಚರಿಕೆ ಅಗತ್ಯ

ಕಬ್ಬೂರಿನ ಶ್ರೀ ಬಿ.ಜಿ.ಬೆಲ್ಲದ ಶಿಕ್ಷಣ ಸಂಸ್ಥೆಯಲ್ಲಿ ಅಗ್ನಿ ಸುರಕ್ಷತೆ ಪ್ರಾತ್ಯಕ್ಷಿಕೆ ಜರುಗಿತು. ಅನುರಾಗ ಬಿ.ಎಲ್., ಕಲ್ಪನಾ ನಗರ ಇತರರಿದ್ದರು.
ಕಬ್ಬೂರಿನ ಶ್ರೀ ಬಿ.ಜಿ.ಬೆಲ್ಲದ ಶಿಕ್ಷಣ ಸಂಸ್ಥೆಯಲ್ಲಿ ಅಗ್ನಿ ಸುರಕ್ಷತೆ ಪ್ರಾತ್ಯಕ್ಷಿಕೆ ಜರುಗಿತು. ಅನುರಾಗ ಬಿ.ಎಲ್., ಕಲ್ಪನಾ ನಗರ ಇತರರಿದ್ದರು.
Published on

ಪಟ್ಟಣದ ಬಿ.ಜಿ.ಬೆಲ್ಲದ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯ ಓಂ ಸೆಂಟ್ರಲ್ ಪಬ್ಲಿಕ್ ಸ್ಕೂಲ್ ಹಾಗೂ ಅನ್ನಪೂರ್ಣಾ ಬಿ. ಬೆಲ್ಲದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಗುರುವಾರ ಅಗ್ನಿ

ಸುರಕ್ಷತೆ ಕುರಿತು ಪ್ರಾತ್ಯಕ್ಷಿಕೆ ಜರುಗಿತು.
ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆ ಠಾಣಾಧಿಕಾರಿ ಅನುರಾಗ ಬಿ.ಎಲ್. ಮಾತನಾಡಿ, ಅಗ್ನಿ ಅವಘಡ ಸಂದರ್ಭದಲ್ಲಿ ಕೈಗೊಳ್ಳ ಬೇಕಾದ ಮುನ್ನೆಚ್ಚರಿಕೆ, ಅಗ್ನಿ ಅವಘಡ ತಡೆಗಟ್ಟುವ ವಿಧಾನ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಸಿಬ್ಬಂದಿ ಪ್ರಕಾಶ ಕುಂಬಾರ, ಮಂಜುನಾಥ ಸನದಿ, ಸಾಂಬ ಲೋಟೆ, ಮಲ್ಲಿಕಾರ್ಜುನ ಕುಂಬಾರ, ಕಂಠೆಪ್ಪ ಮಾಳಗಿ, ಪ್ರಾಂಶುಪಾಲೆ ಕಲ್ಪನಾ ನಗರ, ಲಕ್ಷ್ಮೀ ಮಂತ್ರಣ್ಣವರ, ವಿನೋದ ನರಗುಂದೆ, ಶಿವಾನಂದ ಚೌಗಲಾ, ಮಂಜುನಾಥ ಶಿಂಧೆ, ನಾಗರಾಜ ಕುಂಬಾರ, ಶ್ರೀಧರ ಮಾನೆ, ರಜನಿಕಾಂತ ತಳವಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net