ಸಂವಹನದಿಂದ ಸಾಮರ್ಥ್ಯ ಹೆಚ್ಚಳ

ಬೆಳಗಾವಿಯ ಕೆಎಲ್​ಇ ಸಂಸ್ಥೆ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕ್ಲಿನಿಕಲ್​ ರಿಸರ್ಚ್​ನಲ್ಲಿ ವೃತ್ತಿ ಮಾರ್ಗ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಂಜುನಾಥ ಪಾಟೀಲ ಅವರನ್ನು ಡಾ.ಜೆ.ಎಸ್​. ಕವಳೇಕರ್​ ಸ್ವಾಗತಿಸಿದರು. ಡಿ.ಎಸ್​.ಶೆಟ್ಟರ, ಮನಿಷಾ ಕೆ., ರಿತೀಶ ರೆಡ್ಡಿ ಇತರರಿದ್ದರು.

Published on

ಬೆಳಗಾವಿ:

ಕ್ಲಿನಿಕಲ್​ ರಿಸರ್ಚ್​ ೇತ್ರದಲ್ಲಿ ಜೀವ ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಪದವೀಧರರಿಗೆ ವಿಪುಲ ವೃತ್ತಿ ಅವಕಾಶಗಳಿವೆ. ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನದ ಜತೆಗೆ ಸಂವಹನ ಕೌಶಲ ಬೆಳೆಸಿಕೊಳ್ಳುವಂತೆ ಲ್ಯಾಬ್​ಕಾರ್ಪ್​ ಪೆವೆಟ್​ ಲಿಮಿಟೆಡ್​ನ ಗ್ಲೋಬಲ್​ ಕ್ಲಿನಿಕಲ್​ ಸೀನಿಯರ್​ ಮ್ಯಾನೇಜರ್​ ಮಂಜುನಾಥ ಪಾಟೀಲ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕೆಎಲ್​ಇ ಸಂಸ್ಥೆ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶುಕ್ರವಾರ ಜೈವಿಕ ತಂತ್ರಜ್ಞಾನ ವಿಭಾಗ ಐಕ್ಯೂಎಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕ್ಲಿನಿಕಲ್​ ರಿಸರ್ಚ್​ನಲ್ಲಿ ವೃತ್ತಿ ಮಾರ್ಗಗಳು ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಲಿನಿಕಲ್​ ಡೇಟಾ ಮ್ಯಾನೇಜ್​ಮೆಂಟ್​, ಫಾರ್ಮಕೋವಿಜಿಲೆನ್ಸ್​, ಕ್ಲಿನಿಕಲ್​ ಡೇಟಾ ವಿಶ್ಲೇಷಣೆ, ನಿಯಂತ್ರಣ ವ್ಯವಹಾರಗಳು, ಕ್ಲಿನಿಕಲ್​ ಟ್ರಯಲ್​ ನಿರ್ವಹಣೆ ಸೇರಿದಂತೆ ಡೆ&ಲ್ಯಾಬ್​ ೇತ್ರಗಳಲ್ಲಿನ ಉದ್ಯೋಗಾವಕಾಶ, ಕೃತಕ ಬುದ್ಧಿಮತ್ತೆ ಆಧಾರಿತ ಉದ್ಯೋಗಾವಕಾಶ ಕುರಿತು ವಿವರಿಸಿದರು.

ಜೈವಿಕ ತಂತ್ರಜ್ಞಾನದ ವಿಭಾಗದ ಮುಖ್ಯಸ್ಥೆ ಡಿ.ಎಸ್​.ಶೆಟ್ಟರ, ಮನಿಷಾ ಕೆ., ರಿತೀಶ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net