ಮೊದಲು ಅಶೋಕ ವೃತ್ತದ ಬಳಿ ತಿರುವು ತೆಗೆದುಕೊಳ್ಳುವುದನ್ನು ನಿರ್ಬಂಧಿಸಿದ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದ್ದು, ಇದರಿಂದ ವೃತ್ತದಲ್ಲಿ ಆಗುತ್ತಿದ್ದ ಸಂಚಾರ ಸಿಕ್ಕು ಕಡಿಮೆಯಾಗಿದೆ. ಆದರೆ, ಸುಗಮ ಸಂಚಾರದ ನಿಯಮಗಳನ್ನು ಪಾಲಿಸದವರಿಂದ ಸಮಸ್ಯೆಯಾಗುತ್ತಿದ್ದು, ನಿಯಮ ಉಲ್ಲಂಘಿಸುವವರಿಗೆ ಬಿಸಿ ಮುಟ್ಟಿಸುವ ಕೆಲಸವಾಗಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.