ಕಟ್ಟಡ ಲೋಕಾರ್ಪಣೆ ಭಾನುವಾರ

ಬೋರಗಾಂವದಲ್ಲಿ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ತಾತ್ಯಾಸೋ ಪಾಟೀಲ ಮಾತನಾಡಿದರು. ಪ್ರಜ್ಞಾ ಗಾಂಧಿ, ಭಾವು ನೇಜೆ, ರೋಹನ ಪಾರಖೆ ಇದ್ದಾರೆ.
ಬೋರಗಾಂವದಲ್ಲಿ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ತಾತ್ಯಾಸೋ ಪಾಟೀಲ ಮಾತನಾಡಿದರು. ಪ್ರಜ್ಞಾ ಗಾಂಧಿ, ಭಾವು ನೇಜೆ, ರೋಹನ ಪಾರಖೆ ಇದ್ದಾರೆ.
Published on

ಸದಸ್ಯರಿಗೆ ಸಕಾಲಕ್ಕೆ ಸಾಲ, ಸಹಕಾರ ವಲಯದ ಜತೆಗೆ ಸಾಮಾಜಿಕ ವಲಯಕ್ಕೂ ಆದ್ಯತೆ ನೀಡುವ ಮೂಲಕ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹೆಸರುವಾಸಿಯಾಗಿರುವ ಬೋರಗಾಂವ ಅರ್ಬನ್ ಕೋ-ಆಪರೇಟಿವ್ ಸೊಸೈಟಿಯ ನೂತನ ಕಟ್ಟಡ ಆ.30ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ತಾತ್ಯಾಸೋ ಪಾಟೀಲ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋರಗಾಂವ ಹಾಗೂ ಸುತ್ತಮುತ್ತಲಿನ ಪ್ರದೇಶದ ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂಬ ಉದ್ದೇಶದಿಂದ 32 ವರ್ಷ ಹಿಂದೆ ಸ್ಥಾಪಿಸಿದ ಬೋರಗಾಂವ ಅರ್ಬನ್ ಸೊಸೈಟಿ ಕರ್ನಾಟಕ ಮತ್ತು ಮಹಾರಾಷ್ಟ್ರ ಸೇರಿದಂತೆ 43 ಶಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.
ನಿರ್ದೇಶಕಿ ಪ್ರಜ್ಞಾ ಗಾಂಧಿ ಮಾತನಾಡಿ, ಆಡಳಿತ ಮಂಡಳಿ ನಿಸ್ವಾರ್ಥ ಸೇವೆ, ಸಿಬ್ಬಂದಿ ಪ್ರಾಮಾಣಿಕತೆ ಹಾಗೂ ಸಂಸ್ಥೆಯ ಮೇಲೆ ಸದಸ್ಯರು ಇಟ್ಟಿರುವ ನಂಬಿಕೆಯಿಂದ ಬೋರಗಾಂವ ಅರ್ಬನ್ ಸೊಸೈಟಿ ಪ್ರಗತಿ ಸಾಧಿಸುತ್ತಿದೆ. 267.94 ಕೋಟಿ ರೂ. ಠೇವಣಿ ಹೊಂದಿದ್ದು, 203.56 ಕೋಟಿ ರೂ. ಸಾಲ ವಿತರಿಸಿದೆ ಎಂದರು.
ಉಪಾಧ್ಯಕ್ಷ ಭಾವು ನೇಜೆ, ನಿರ್ದೇಶಕ ವಸಂತ ಪೂಜಾರಿ, ಭೂಪಾಲ ಮಗದುಮ್ಮ, ಅಣ್ಣಾಸಾಬ ತಾವದಾರೆ, ಮಹಾದೇವ ಘುನಕೆ, ಸೋಮಣ್ಣ ಪಾಟೀಲ, ಬಜರಂಗ ಶಿರಗರೆ, ಕೃಷ್ಣ ಮಹಾಜನ, ಮಾಣಿಕ ಕರೋಲೆ, ಸಿಇಒ ರೋಹನ್ ಪಾರಖೆ, ಸಹಾಯಕ ವ್ಯವಸ್ಥಾಪಕ ಸತೀಶ ಅಲಂಕಾರ, ವಿಶಾಲ ಪಾಟೀಲ, ರಾವಸಾಹೇಬ ಹರ್ಗಾಪುರೆ, ಗುಂಡು ಪಾಟೀಲ, ಆದಪ್ಪ ಬಂಕಾಪುರೆ, ಬಾಬಾಸಾಹೇಬ ನೇಜೆ, ನಿತಿನ ದೇಶಮಾನೆ, ಶಾಂತಿನಾಥ ಹುಗ್ಗೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net