ಭಾರತದ ಅತಿದೊಡ್ಡ ಮತ್ತು ಅತ್ಯಂತ ನಿರೀಕ್ಷಿತ ವಧುವಿನ ಚಿನ್ನಾಭರಣಗಳ ಅಭಿಯಾನ ಇದಾಗಿದ್ದು, ಈ ಸಲದ ಆವೃತ್ತಿ 22 ವಧುಗಳು ಮತ್ತು 10 ತಾರಾ ನಟಿಮಣಿಗಳನ್ನು ಒಂದೆಡೆ ಸೇರಿಸಲಿದೆ. ಇವರಲ್ಲಿ ಶ್ರೀನಿಧಿ ಶೆಟ್ಟಿ, ಕಾರ್ತಿ, ಎನ್‌ಟಿಆರ್, ಆಲಿಯಾ ಭಟ್ಟ, ಕರೀನಾ ಕಪೂರ್ ಖಾನ್, ಅನಿಲ್ ಕಪೂರ, ರುಕ್ಮಿಣಿ ಮೈತ್ರಾ, ಸವ್ಯಸಾಚಿ ಮಿಶ್ರಾ, ಪ್ರಾರ್ಥನಾ ಬೆಹೆರೆ ಮತ್ತು ಮಾನಸಿ ಪಾರೇಖ ಮತ್ತಿತರ ಖ್ಯಾತನಾಮರು ಸೇರಿದ್ದಾರೆ.