ಈಗಾಗಲೇ ಜಿಲ್ಲೆ ವಿಭಜನೆ, ಹೊಸ ತಾಲೂಕುಗಳ ರಚನೆ ಕುರಿತು ವಿವಿಧ ಸಂಘಟನೆಗಳು, ಸಲ್ಲಿಸಿರುವ ಮನವಿಗಳನ್ನು ಪುರಸ್ಕರಿಸಿರುವ ಸರ್ಕಾರ ಇದೀಗ ಹೊಸ ಜಿಲ್ಲೆ, ತಾಲೂಕು ಸೃಜನೆ, ಮೂಲ ಸೌಕರ್ಯ, ಭೌಗೋಳಿಕ ವಿಸ್ತೀರ್ಣ, ಆಡಳಿತಾತ್ಮಕ ಅಗತ್ಯ, ನಗರ ಮತ್ತು ಗ್ರಾಮಗಳ ನಡುವಿನ ದೂರ ಸೇರಿ ಸಮಗ್ರ ಮಾಹಿತಿ ಕುರಿತು ಬೆಳಗಾವಿ ಪ್ರಾದೇಶಿಕ ಆಯುಕ್ತರಿಂದ ಮಾಹಿತಿ ಪಡೆದುಕೊಂಡಿದೆ. ಒಟ್ಟಾರೆ ಜಿಲ್ಲೆ ವಿಭಜನೆಯ ವಿಷಯದಲ್ಲಿ ಸರ್ಕಾರ ಏನು ನಿರ್ಧಾರ ಕೈಗೊಳ್ಳಲಿದೆ ಎಂಬುದು ಕುತೂಹಲದ ವಿಷಯವಾಗಿದೆ.