ಕಂಟೇನರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು

accident
accident
Published on
ಖಾನಾಪುರ: ರಾಮನಗರ-ಅಳ್ನಾವರ ಮಾರ್ಗದಲ್ಲಿರುವ ಘಾಲಿ ಕ್ರಾಸ್‌ನಲ್ಲಿ ಬುಧವಾರ ಕಂಟೇನರ್ ವಾಹನ ಹಾಯ್ದು ಜೋಯಿಡಾ ತಾಲೂಕಿನ ಮಲಂಬ ಗ್ರಾಮದ ಬಾಲಕೃಷ್ಣ ಯಶವಂತ ಚೌಧರಿ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಕ್‌ನಲ್ಲಿ ಅಳ್ನಾವರದಿಂದ ರಾಮನಗರದತ್ತ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಾಲಕ ಪರಾರಿಯಾಗಿದ್ದು, ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net