ವಿದ್ಯಾರ್ಥಿಗಳ ಕಲಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ದೇಣಿಗೆ ರೂಪದಲ್ಲಿ ಡೆಸ್ಕ್ ನೀಡಲಾಗುತ್ತಿದೆ ಎಂದು ಪ್ರಯತ್ನ ಸಂಘಟನೆ ಅಧ್ಯಕ್ಷೆ ಶಾಂತಾ ಆಚಾರ್ಯ ಹೇಳಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ಡೆಸ್ಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಆಸಕ್ತಿ ಹೊಂದಬೇಕು. ಗಾಯನ, ನೃತ್ಯ, ಚಿತ್ರಕಲೆ, ಕ್ರೀಡೆ, ಸಾಹಿತ್ಯ, ಸಂಗೀತ, ಭಾಷಣ, ನಾಟಕ ಮತ್ತು ಮಕ್ಕಳಲ್ಲಿನ ವಿವಿಧ ಕಲೆಗಳನ್ನು ಪ್ರೋತ್ಸಾಹಿಸಲು ಪ್ರಯತ್ನ ಸಂಘಟನೆ ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯ ಕೈಗೊಳ್ಳುತ್ತಿದೆ ಎಂದರು.
ಹಿರಿಯ ಪತ್ರಕರ್ತ ಎಂ.ಕೆ ಹೆಗಡೆ ಮಾತನಾಡಿ, ಪ್ರತಿಯೊಬ್ಬರೂ ತಾವು ಕಲಿತ ಶಾಲೆೆ-ಕಾಲೇಜು, ಊರು, ಶಿಕ್ಷಕರಿಗೆ ಮತ್ತು ವಿಶೇಷವಾಗಿ ಹೆತ್ತವರಿಗೆ ಗೌರವ ನೀಡುವುದನ್ನು ರೂಢಿಸಿಕೊಳ್ಳಬೇಕು. ದೊಡ್ಡವರಾದ ಮೇಲೆ ಸಾಮಾಜಿಕ ಕಾರ್ಯ ಮಾಡುವುದನ್ನು ಮರೆಯಬಾರದು ಎಂದರು.
ಸಂಘಟನೆ ಸದಸ್ಯರಾದ ಸುಮಾ ಹೊಂಡದ, ಲತಾ ಕಟ್ಟಿ, ಶೀಲಾ ದೇಶಪಾಂಡೆ, ವೀಣಾ ಕುಲಕರ್ಣಿ, ಶುಭಾ ಕಡಗದಕೈ, ವರದಾ ಭಟ್, ಪದ್ಮಾ ವೇರ್ಣೇಕರ, ಬೀನಾ ರಾವ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಸನ್ನ ಕುಲಕರ್ಣಿ, ಪ್ರಾಚಾರ್ಯ ಎಸ್.ಕೆ.ಅಕಿವಾಟ, ಎಫ್.ಡಿ.ತಳವಾರ,