ಯಡ್ರಾಂವ ಕನ್ನಡ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಗಣ್ಯರು ಉದ್ಘಾಟಿಸಿದರು. ಕೆ.ಆರ್.ಕೋಟಿವಾಲೆ, ಎಸ್.ಎಂ.ಕಳ್ಳೆ, ಡಿ.ಬಿ.ಕಬ್ಬೂರೆ ಇತರರಿದ್ದರು.
ತಾಲೂಕಿನ ಯಡ್ರಾಂವ ಗ್ರಾಮದ ಕೆಎಲ್‌ಇ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ರಕ್ಷಣೆಗಾಗಿ ಸರ್ಕಾರ ಕಠಿಣ ಕಾನೂನು ಜಾರಿಗೆ ತಂದಿದೆ. ಅವುಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು ಎಂದರು. ವಕೀಲ ಎಸ್.ಎಂ.ಕಳ್ಳೆ ಮಾತನಾಡಿ, ಕಾನೂನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರದೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮುಖ್ಯಶಿಕ್ಷಕ ಡಿ.ಬಿ.ಕಬ್ಬೂರೆ, ಉಪನ್ಯಾಸಕ ಆರ್.ಎಸ್. ಪಾಟೀಲ, ಆದರ್ಶ ಮಗದುಮ್ಮ, ಶಿವಪುತ್ರ ಕಾಂಬಳೆ, ಶಿಕ್ಷಕಿ ಮಾಯವ್ವ ಖಿಲಾರೆ, ಎ.ಎ.ಪೂಜೇರಿ, ರಾಜಶ್ರೀ ಪಾಟೀಲ ಇತರರು ಇದ್ದರು.