ಸಮೀಪದ ಸೊಪ್ಪಡ್ಲ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಸೋಮವಾರ ಅಶ್ವಾರೂಢ ಬಸವೇಶ್ವರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.
ಬೆಳಗಾವಿ ಮಾಜಿ ಸಂಸದ ಎ.ಕೆ.ಕೊಟ್ರಶೆಟ್ಟಿ ಮಾತನಾಡಿ, ಬಸವಣ್ಣನ ತತ್ತ್ವ ಸಮಾಜದಲ್ಲಿ ಸಮಾನತೆ ಸಾರುತ್ತವೆ. ನಿತ್ಯ ಜೀವನದಲ್ಲಿ ಅವುಗಳನ್ನು ಅನುಸರಿಸಿದರೆ 12ನೇ ಶತಮಾನದ ಶರಣ ಪರಂಪರೆ ಮರುಕಳಿಸುತ್ತದೆ ಎಂದರು.
ಸದಸ್ಯ ಈರಣ್ಣ ಗೌಡರ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಶ್ರೀಶೈಲ ಕೊಟ್ರಶೆಟ್ಟಿ, ಪ್ರಕಾಶ ವಾಲಿ, ಮಹಾಂತೇಶ ಉರಬಿನವರ, ವೀರೇಶ ಬ್ಯಾಹಟ್ಟಿ, ಗೌಡಪ್ಪ ಕಮಗೌಡರ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಶೇಖಪ್ಪ ಹರಳಿ, ಚಂದ್ರಶೇಖರ ಅಂಗಡಿ, ಗುರುಲಿಂಗಯ್ಯ ಹಿರೇಮಠ, ಐ.ಕೆ.ಗೌಡರ, ಮಹಾಂತೇಶ ಕತ್ತಿ, ವಿಜಯ ಅಂಗಡಿ ಇತರರಿದ್ದರು.