ಶ್ರೀರಾಮ ಸೇನೆಯಿಂದ ಬ್ಯಾನರ್ ಅಭಿಯಾನ ಆರಂಭ

ಬೆಳಗಾವಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೋಮವಾರ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ನೇತನ್ಯಾಹು, ಮೋದಿ ಭಾವಚಿತ್ರವುಳ್ಳ ಬ್ಯಾನರ್ ಅಳವಡಿಸಲಾಯಿತು.
ಬೆಳಗಾವಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೋಮವಾರ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ನೇತನ್ಯಾಹು, ಮೋದಿ ಭಾವಚಿತ್ರವುಳ್ಳ ಬ್ಯಾನರ್ ಅಳವಡಿಸಲಾಯಿತು.
Published on
ಬೆಳಗಾವಿ : ನಗರದಲ್ಲಿ ಅಳವಡಿಸಿರುವ ಇರಾನ್ ದೇಶದ ಅಲಿ ಖಮೇನಿ ಪೋಸ್ಟರ್ ವಿರುದ್ಧ ಶ್ರೀರಾಮ ಸೇನೆಯಿಂದ ಆಫ್ಜಲ್‌ಖಾನ್‌ನ ವಧೆ ಮಾಡುತ್ತಿರುವ ಛತ್ರಪತಿ ಶಿವಾಜಿ ಹಾಗೂ ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಭಾರತದ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ಬ್ಯಾನರ್‌ಗಳನ್ನು ಸೋಮವಾರ ಅಳವಡಿಸಿದೆ.
ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಅಶೋಕ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಈ ಬ್ಯಾನರ್‌ಗಳನ್ನು ಅಳವಡಿಸಿದರು. ಇದರಲ್ಲಿ ಯುಗಾದಿಯ ಶುಭಾಶಯವನ್ನೂ ಕೋರಲಾಗಿದೆ. ಇದೇ ರೀತಿ ನಗರದ ವಿವಿಧೆಡೆಯೂ ಕಾರ್ಯಕರ್ತರು ಬ್ಯಾನರ್ ಅಳವಡಿಸಲು ಮುಂದಾಗಿದ್ದಾರೆ.
ನಗರದ ವಿವಿಧೆಡೆಗಳಲ್ಲಿ ಖಮೇನಿಯ ಆಳೆತ್ತರದ ಕಟೌಟ್‌ಗಳನ್ನು ಅಳವಡಿಸಲಾಗಿದ್ದು, ಇದು ದೇಶಹದ್ರೋಹದ ಕೃತ್ಯ. ಈ ಕೂಡಲೇ ತೆರವುಗೊಳಿಸಬೇಕು ಎಂದು ಶ್ರೀರಾಮಸೇನೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿತ್ತು. ಆದರೆ ತೆರವು ಮಾಡಿಸದೇ ಇರುವುದರಿಂದ ಅದಕ್ಕೆ ಪ್ರತಿಯಾಗಿ ಈಗ ಸೇನೆಯೂ ಬ್ಯಾನರ್ ಅಭಿಯಾನ ಆರಂಭಿಸಿದ್ದೇವೆ ಎಂದು ಮುತಾಲಿಕ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net